ವೈರಾಗ್ಯ ಸಂಪನ್ನೆ ಬೊಂತಾದೇವಿ

Posted In : ಗುರು

ಎಸ್.ಜಿ.ಗೌಡರ

ಭಿಕ್ಷೆ ಬೇಡುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡ ಬೊಂತಾದೇವಿ, ಕಲ್ಯಾಣದಲ್ಲಿ ತಿಪ್ಪೆಯಪ್ಪರಿಗೆಯನ್ನದೆ ಎಲೆಯ ಮರೆಯ ಹೂವಾಗಿ, ಸಾಧನೆ ಮಾಡುತ್ತಾ ಉಳಿದು ಕೊಳ್ಳುತ್ತಾಳೆ. ಅಸಂಖ್ಯಾತ ಶರಣರ ತಾಣವಾದ ಕಲ್ಯಾಣ ದಲ್ಲಿ ಬೊಂತಾದೇವಿಯನ್ನು ಯಾರು ಗಮನಿಸಿರುವುದಿಲ್ಲ, ದಿವ್ಯಜ್ಞಾನಿಯಾದ ಅಲ್ಲಮಪ್ರಭು ಮಾತ್ರ ಆಕೆಯ ಗುಪ್ತಭ ಕ್ತಿಯ ನೆಲೆಯನ್ನು ಗಮನಿಸುತ್ತಾನೆ.

ಲೋಕದ ಕಣ್ಣಿಗೆ ಕಂಡರೂ ತನ್ನ ಅಸಾಮಾನ್ಯ ಗುಪ್ತ ಭಕ್ತಿಯಿಂದ ಮರುಳಶಂಕರ ದೇವರಿಗೆ, ನಿಷ್ಠೆಯಿಂದ ನೀಲಾಂಬಿಕೆಗೆ, ವಿರಕ್ತಿಗೆ ಕ್ಕಮಹಾದೇವಿಗೆ, ಜಾತೀಯತೆಯ ವಿಡಂಬನೆಯಲ್ಲಿ ಪ್ರಭುದೇವ ರಿಗೆ, ಶ್ರದ್ದೆಗೆ ಕೊಟ್ಟದ ಸೋಮವ್ವೆಗೆ ಸಮವೆನಿಸಿ, ಎಲ್ಲ ಶರಣರ ಮೆಚ್ಚುಗೆಗೆ ಪಾತ್ರಳಾದವಳೇ ಬೊಂತಾದೇವಿ. ಬೊಂತಾದೇವಿ ಕಾಶ್ಮೀರದ ಪಾಂಡವ್ಯಪುರದ ಅರಸು ಕುಮಾರಿಯಾಗಿದ್ದು, ಶ್ರೇಷ್ಠ ಶರಣ, ಕಾಯಕ ಕಲಿ ಎಂದೇ ಹೆಸರುವಾಸಿಯಾದ ಮೊಳಿಗೆ ಮಾರ ಯ್ಯನ ಸಹೋದರಿ. ಮೂಲನಾಮವಾದ ನಿಜದೇವಿ ಯಿಂದ ಬೊಂತಾದೇವಿಯಾಗಿ ನಾಮಾಂಕಿತಗೊಂಡು ಗುಪ್ತಭಕ್ತಿಗೆ ಹೆಸರು ವಾಸಿಯಾದಳು.

ಬೊಂತಾದೇವಿಯ ಜೀವನಕ್ಕೆ ಸಂಬಂಧಿಸಿದಂತೆ ಭೈರವೇಶ್ವರ ಕಾವ್ಯದ ಸೂತ್ರರತ್ನಾಕರದಲ್ಲಿ ಕಥೆಯೊಂದು ಉಕ್ತವಾಗಿದೆ. ಅದರ ಪ್ರಕಾರ ಬೊಂತಾದೇವಿಯ ಮೊದಲಿನ ಹೆಸರು ನಿಜದೇವಿ. ಸುಜ್ಞಾ ನದಿಂದ ವೈರಾಗ್ಯಸಂಪನ್ನೆಯಾದ ಆಕೆ ತನಗೆ ಶಿವನ ಭ್ರಾಂತಿ ಎಂದು ಹೇಳಿ ದಿಗಂಬರೆಯಾಗಿ, ಹಸ್ತದಲ್ಲಿ ಲಿಂಗಹಿಡಿದು, ಕಲ್ಯಾಣ ಭಿಮುಖವಾಗಿ ಹೊರಡುತ್ತಾಳೆ. ಕಾಡಿನಲ್ಲಿ ಏಕಾಂಗಿ ಯಾಗಿ ಹೊರಟ ಆಕೆಯ ಮನಪರೀಕ್ಷೆ ಮಾಡಲು ಶಿವ ಸುಂದರ ಯುವಕ ನಾಗಿ ಕಾಣಿಸಿಕೊಂಡು ನನ್ನನ್ನು ಮದುವೆಯಾಗಬೇಕು ಎಂದು ಕೇಳುತ್ತಾನೆ. ಆಗ ನಿಜದೇವಿ ತನ್ನ ಭಕ್ತಿ ಜ್ಞಾನಗಳ ಬಲದಿಂದ ಗಂಗೆ ಗೌರಿಯರ ಸ್ವಾಮಿ ಶಿವನನ್ನು ಗುರುತಿಸುತ್ತಾಳೆ. ಪ್ರಸನ್ನನಾದ ಶಿವ ಬೊಂತೆಯನ್ನು ಕೊಡುತ್ತಾನೆ. ಶಿವನ ಆದೇಶದಂತೆ ಬೊಂತೆಯನ್ನು ಹೊತ್ತು ನಡೆದ ನಿಜದೇವಿ, ಅಂದಿನಿಂದ ಬೊಂತಾ ದೇವಿಯೆಂಬ ಹೆಸರಿನಿಂದ ಖ್ಯಾತಳಾಗುತ್ತಾಳೆ.

ಭಿಕ್ಷೆ ಬೇಡುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡ ಬೊಂತಾದೇವಿ, ಕಲ್ಯಾಣದಲ್ಲಿ ತಿಪ್ಪೆಯಪ್ಪರಿಗೆಯನ್ನದೆ ಎಲೆಯ ಮರೆಯ ಹೂವಾಗಿ, ಸಾಧನೆ ಮಾಡುತ್ತಾ ಉಳಿದುಕೊಳ್ಳುತ್ತಾಳೆ. ಅಸಂಖ್ಯಾತ ಶರಣರ ತಾಣವಾದ ಕಲ್ಯಾಣದಲ್ಲಿ ಬೊಂತಾದೇವಿಯನ್ನು ಯಾರು ಗಮನಿಸಿರುವುದಿಲ್ಲ, ದಿವ್ಯಜ್ಞಾನಿಯಾದ ಅಲ್ಲಮಪ್ರಭು ಮಾತ್ರ ಆಕೆಯ ಗುಪ್ತಭಕ್ತಿಯ ನೆಲೆಯನ್ನು ಗಮನಿಸುತ್ತಾನೆ. ಅಕ್ಕಮಹಾದೇವಿ ಶ್ರೀ ಶೈಲದ ಕದಳಿಗೆ ಹೊರಟು ನಿಂತಾಗ, ಆಕೆಯನ್ನು ಬೀಳ್ಕೊಡಲು ಸೇರಿದ ಶರಣರೆಲ್ಲ ಮಹಾದೇವಿಯಂಥ ಎಂದು ಉದ್ಗಾರ ತೆಗೆಯುತ್ತಾರೆ. ಆಗ ನೆರೆದ ಶರಣವೃಂದಕ್ಕೆ ಅಲ್ಲಮಪ್ರಭು ಬೊಂತಾದೇವಿಯ ಮಹಿಮೆಯನ್ನು ತಿಳಿಹೇಳುತ್ತಾನೆ. ಕಲ್ಯಾಣಕ್ರಾಂತಿಯ ನಂತರ ಶರಣರೆಲ್ಲ ದಿಕ್ಕಾಪಾಲಾಗಿ ಅನೇಕ ಕಡೆಗೆ ಚದುರಿಹೋದರು.

ತಾದೇವಿ ಕೊನೆಯವರೆಗೆ ಕಲ್ಯಾಣದಲ್ಲೆ ಇದ್ದು, ತನ್ನ ಅಂತ್ಯಕಾಲದಲ್ಲಿ ಶಿವನು ತನಗೆ ಕೊಟ್ಟಿದ್ದ ಬೊಂತೆಯನ್ನು ಆಕಾಶಕ್ಕೆ ತೂರುತ್ತಾಳೆ. ಅದು ಹರಡುತ್ತ ಅಲ್ಲಿಯೇ ಬಯಲಾಗುತ್ತದೆ. ಇತ್ತ ಬೊಂತಾದೇವಿ ಲಿಂಗದೊಳಗಾಗುತ್ತಾಳೆ. ಬಿಡಾಡಿ ಎಂಬ ಅಂಕಿತದಲ್ಲಿ ಬೊಂತಾದೇವಿ ವಚನಗಳನ್ನು ರಚಿಸಿದ್ದು ಐದು ವಚನಗಳು ದೊರಕಿವೆ. ಶಬ್ದಶಕ್ತಿಯ ಸಾಮರ್ಥ್ಯವನ್ನು ಅಭಿವ್ಯ ಕ್ತಿಸಿ, ಜ್ಞಾನಕ್ಕೂ ಸಾಮ್ಯತೆಯನ್ನು ತಿಳಿಸಿ ವಚನಗಳಲ್ಲಿ ವೇದ, ಪುರಾಣ, ಆಗಮಗಳನ್ನು ತ್ರಿಮೂರ್ತಿಗಳಿಗೆ ಹೋಲಿಸಿ ದ್ದಾಳೆ. ವಚನಾಂಕಿತವು ಬಯಲು ರೂಪಿ ಭಗವಂತನನ್ನು ಸಂಕೇತಿಸುವುದರ ಜತೆಗೆ ಆಕೆಯ ಸ್ವತಂತ್ರ ಮನೋಧರ್ಮವನ್ನು ತಿಳಿಸುತ್ತದೆ.

’ಊರ ಒಳಗಣ ಬಯಲು, ಊರ ಹೊರಗಣ ಬಯಲುಂಟೇ ?/ಊರೊಳಗೆ ಬ್ರಾಹ್ಮಣ ಬಯಲು ಊರ ಹೊರಗೆ ಹೊಲೆ
ಬಯಲೆಂದುಂಟೆ? ಎಲ್ಲಿ ನೋಡಿದೊಡೆ ಬಯಲೊಂದೆ/
ಭಿತ್ತಿಯಿಂದ ಒಳಹೊರಗೆಂಬ ನಾಮವೈಸೆ
ಎಲ್ಲಿ ನೋಡಿದೊಡೆ ಕರೆದಡೆ ಓ ಎಂಬಾತನೆ ಬಿಡಾಡಿ’
ಎಂಬ ವಚನದ ಮೂಲಕ ಕುಲ ಒಂದೇ ಎಂದು ಸ್ವಾರ್ಥಿಯಾದ ಮಾನವ ಭಿತ್ತಿಮಾತ್ರದಿಂದ ಬಯಲಿನಲ್ಲಿ ಒಳಹೊರಗೆಂಬ ಅಂತರ ಉಂಟಾಗುವಂತೆ, ಮಾನವ ತನ್ನ ಕಲ್ಪನೆಯ ಭಿತ್ತಿಯಿಂದ ಮೇಲುಕಿಳೆಂಬ ಜಾತಿಯ ಕೃತ್ರಿಮತೆಯನ್ನುಂಟು ಮಾಡಿ ಕೊಂಡಿದ್ದಾನೆ. ಅನಂತವಾದ ಬಯಲೊಂದೇ ಇರುವಂತೆ ಸರ್ವವ್ಯಾಪಿ ಭಗವಂತನೊಬ್ಬನೇ, ಕುಲವೊಂದೇ ಎಂಬ ಭಾವನೆ ಯನ್ನು ವಚನಗಳ ಮೂಲಕ ವ್ಯಕ್ತಪಡಿಸಿದ್ದಾಳೆ.

ಶಬ್ಧಗಳಲ್ಲಿ ಅಪಾರವಾದ ಅಧ್ಯಾತ್ಮಿಕ ಅರ್ಥವನ್ನು ತುಂಬಿ ತನ್ನ ವಚನರಚನಾ ಸಾಮರ್ಥ್ಯವನ್ನು ಬೊಂತಾದೇವಿ ತೋರಿ ದ್ದಾಳೆ. ಬಯಲು ಅಂದರೆ ಶೂನ್ಯ. ಈ ಶೂನ್ಯದಿಂದಲೆ ವಿಶ್ವ. ಈ ಶೂನ್ಯ ಸಂಪಾದನೆಯೇ ಭಕ್ತನ ಪರಮ ಗುರಿ. ಬಯಲನ್ನು ಶಿವ ನಲ್ಲಿ ಒಂದಾಗಿ ಎಲ್ಲರೂ ಬಯಲಾಗುದೇ ಜೀವನದ ಅಂತ್ಯ ಎಂದಿದ್ದಾಳೆ.

Leave a Reply

Your email address will not be published. Required fields are marked *

5 − 3 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top