ಆಪ್ತಕಾಲ

Posted In : ವಿ +

ಸನಿಹಾ

*ನಾನೊಬ್ಬ ಗೃಹಿಣಿ. ಮನೆಯನ್ನು ಚೆನ್ನಾಗಿ ಸಂಭಾಳಿಸುತ್ತಿದ್ದೇನೆ. ನನ್ನ ಪತಿ ಪ್ರತಿಷ್ಟಿತ ಕಂಪನಿಯೊಂದರಲ್ಲಿ ಉನ್ನತ ಹುದ್ದೆ ಯಲ್ಲಿದ್ದಾರೆ. ನನ್ನ ಸಮಸ್ಯೆ ಯೆಂದರೆ ಗಂಡ ಆಫೀಸಿನ ಟ್ರಿಪ್, ಪಾರ್ಟಿ, ಕಾರ್ಯಕ್ರಮಗಳಿಗೆ ನನ್ನನ್ನು ಕರೆದೊಯ್ಯುವುದಿಲ್ಲ. ಅವರ ಸಹೋದ್ಯೋಗಿಗಳ ಜತೆಗೆ ನಾನು ಬೆರೆಯುವುದು ಇಷ್ಟವಾಗುವುದಿಲ್ಲ. ಇದರಿಂದ ಎಷ್ಟೋ ಬಾರಿ ನನಗೆ ಏಕಾಂಗಿ ಅಂತನ್ನಿಸು ತ್ತದೆ. ಪತಿ ವೀಕೆಂಡ್‌ಗಳಲ್ಲಿ ಅವರ ಸ್ನೇಹಿತರ ಜತೆಗೆ ಬ್ಯುಸಿಯಾ ಗಿದ್ದರೆ, ನಾನು ನನ್ನ ಮಕ್ಕಳು ಹಾಗೂ ಮಾವಂದಿರ ಜತೆಗೆ ಮನೆಯಲ್ಲೇ ಸಮಯ ಕಳೆಯು ತ್ತೇನೆ. ಒಟ್ಟಾರೆ ಬದುಕೇ ಬೇಸರವನ್ನಿಸುತ್ತಿದೆ.
ಮೈನಾ, ರಾಜಾಜಿನಗರ

ಇಷ್ಟಕ್ಕೆಲ್ಲಾ ಚಿಂತಿಸುವ ಅಗತ್ಯವೇ ಇಲ್ಲ. 21ನೆಯ ಶತಮಾನದ ಹೆಣ್ಣುಮಗಳು ನೀವು. ಪತಿ ನಿಮ್ಮನ್ನು ಟ್ರಿಪ್, ಪಾರ್ಟಿಗಳಿಗೆ ಕರೆ ದೊಯ್ಯುವುದಿಲ್ಲ, ಅವರ ಸಹದ್ಯೋಗಿಗಳ ಜತೆಗೆ ಬೆರೆಯಲು ಬಿಡುವುದಿಲ್ಲ ವೆಂದಿದ್ದೀರಿ. ನೀವು ಸ್ವಂತಿಕೆ ಬೆಳೆಸಿಕೊಳ್ಳಿ. ನಿಮ್ಮ ಲ್ಲಿರುವ ಪ್ರತಿಭೆಯನ್ನು ಹೊರತರಲು ಪ್ರಯತ್ನಿಸಿ. ತುಂಬಾ ಬೇಸರವೆನಿಸಿದರೆ ಕೆಲಸಕ್ಕೆ ಸೇರಿ. ಇದರಿಂದ ನೀವು ಸ್ವಾವ ಲಂಬಿ ಯಾಗುವುದಷ್ಟೇ ಅಲ್ಲದೆ, ಸಹೋದ್ಯೋಗಿ, ಸ್ನೇಹಿತರನ್ನು ಸಂಪಾದಿಸಬಹುದು. ನಿಮ್ಮ ವಿಸ್ತರಿಸುತ್ತದೆ. ಆಗ ನೀವು ಪತಿಯ ಮೇಲೆ ಅವಲಂಬಿತರಾಗುವ ಅಗತ್ಯವಿಲ್ಲ. ಸಣ್ಣ ಪುಟ್ಟದಕ್ಕೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯೇ ಬರುವುದಿಲ್ಲ.
***
ನನಗೆ ನಲ್ವತ್ತೆರಡು ವರ್ಷ. ನನ್ನ ಪತ್ನಿ ಒಂದೂವರೆ ವರ್ಷದ ಹಿಂದೆ ನನ್ನನ್ನು ಬಿಟ್ಟು ಹೋಗಿದ್ದಾಳೆ. ಮನೆಯಲ್ಲಿ ಇನ್ನೊಂದು ಮದುವೆಯಾಗು ಎಂದು ಒತ್ತಾಯಿಸುತ್ತಿದ್ದರೆ. ಒಮ್ಮೆ ಆದ ಕಹಿ ಅನುಭವದಿಂದಾಗಿ, ಮತ್ತೊಂದು ಮದುವೆಯ ಬಗ್ಗೆ ಹಿಂಜರಿ ಯುತ್ತಿದ್ದೇನೆ. ಹೆಣ್ಣು ಎಂದರೆ ಏನೋ ಭಯ, ತಾತ್ಸಾರ. ಈ ಸನ್ನಿವೇಶದಿಂದ ಹೊರಬರುವುದು ಹೇಗೆ?
ವಿವೇಕ್, ಕಾರವಾರ
ನಿಮ್ಮ ಪತ್ನಿ ಯಾವ ಕಾರಣದಿಂದ, ದೂರವಾದರು ಅನ್ನುವುದನ್ನು ನೀವು ಹೇಳೇ ಇಲ್ಲ. ಆ ಕಾರಣವನ್ನು ನೀವು ಮತ್ತೆ ವಿಶ್ಲೇಷಿಸಿ. ಆಗಲೇ ನಿಮ್ಮ ಮನಸ್ಥಿತಿ ಗಟ್ಟಿಯಾಗುತ್ತದೆ. ಅನಾವಶ್ಯಕವಾಗಿ ಹೆಣ್ಣನ್ನು ದೂರುವ ಮನೋಭಾವವನ್ನು ಮನದಿಂದ ಕಿತ್ತೊಗೆ ಯಲು ಸಾಧ್ಯ. ಒಂದು ರೀತಿಯಲ್ಲಿ ಹಳೆಯ ಅನುಭವ ನಿಮ್ಮನ್ನು ಇನ್ನಷ್ಟು ಸದೃಢನನ್ನಾಗಿಸಬಹುದು. ಮುಂದೆ ಮದುವೆ ಯಾದಾಗ ನಿಮ್ಮಲ್ಲೇನು ಬದಲಾವಣೆಗಳಾಗಬೇಕು ಎಂಬುದನ್ನು ಆ ಅನುಭವವೇ ನಿಮಗೆ ಹೇಳಿಕೊಡುತ್ತದೆ. ಇಷ್ಟೆಲ್ಲಾ ಆದರೂ ನಿಮ್ಮ ಮನೋಸ್ಥಿತಿ ಸುಧಾರಿಸಿಲ್ಲವೆಂದಾದರೆ ಮ್ಯಾರೇಜ್ ಕೌನ್ಸಿಲರ್‌ನ್ನು ಭೇಟಿಯಾಗಿ. ನಿಮ್ಮ ಮನಸ್ಸಿನ ಅನಾವಶ್ಯಕ ಒತ್ತಡ ವನ್ನು ಕಡಿಮೆ ಮಾಡಬಹುದು.

Leave a Reply

Your email address will not be published. Required fields are marked *

eighteen + 8 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top