ಸೇನೆಯ ದಿಟ್ಟ ಉತ್ತರ

Posted In : ಸಂಪಾದಕೀಯ-1

ಸಾವಿನ ಮನೆಯಲ್ಲಿಯೂ ಹಿರಿಯುವ ಅಸಾದುದ್ದೀನ್ ಒವೈಸಿಯಂತಹ ರಾಜಕಾರಣಿಗಳಿಗೆ ಸೇನೆ ತಕ್ಕ ಪಾಠ ಹೇಳಿದೆ. ಕಳೆದ ವಾರ ಸುನ್‌ಜ್ವಾನ್ ಸೇನಾ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಹುತಾತ್ಮರಾದ ಯೋಧರ ಪೈಕಿ ಹೆಚ್ಚಿನ ವರು ಮುಸಲ್ಮಾನರಾಗಿದ್ದರು ಎಂದು ಹೇಳುವ ಮೂಲಕ ಎಂಐಎಂ ಪಕ್ಷದ ಸಂಸದ ಹಾಗೂ ವಿವಾದಗಳಲ್ಲಿಯೇ ಅಸ್ತಿತ್ವ ಕಂಡುಕೊಂಡಿರುವ ಅಸಾದು ದ್ದೀನ್ ಒವೈಸಿ ಸೇನೆಯಲ್ಲಿ ಇಲ್ಲದ ಜಾತಿ ಸಂಸ್ಕೃತಿಯನ್ನು ಬಿಂಬಿಸುವ ಪ್ರಯತ್ನ ಮಾಡಿದ್ದರು.

ಇಂತಹ ನಾಯಕರಿಗೆ ರಾಜಕಾರಣ ಮಾಡಲು ಯಾವ ವಿಷಯವಾದರೂ ಆದೀತು. ಅದರ ಹಿನ್ನೆಲೆ ಮುನ್ನಲೆಗಳನ್ನು ವಿವೇಚಿಸದೆ ನಾಲಗೆ ಹರಿಯ ಭಾರ ತದ ರಾಜಕಾರಣ ಇಂದು ಜಾತಿ, ಮತಗಳ ಮೇಲೆ ವಿಂಗಡಣೆ ಆಗಿರಬಹುದು. ಪ್ರಜಾಪ್ರಭುತ್ವಕ್ಕೆ ಜಾತಿ ಬಣ್ಣ ಬಳಿಯುವ ಪ್ರಯತ್ನಗಳು ಎಗ್ಗಿಲ್ಲದೇ ಸಾಗಿರಬಹುದು. ಆದರೆ ಕಳೆದ 70 ವರ್ಷಗಳಿಂದಲೂ ದೇಶದ ಗಡಿ ಕಾಯುವ ಯೋಧರು ತಮ್ಮ ನಡುವೆ ಜಾತಿಯ ವಿಷಬೀಜ ಮೊಳಕೆಯೊಡೆಯಲು ಬಿಟ್ಟಿಲ್ಲ. ಇಂದು ಭಾರತ ಒಂದು ಸದೃಢ ದೇಶವಾಗಿ ಬೆಳೆದಿದ್ದರೆ, ಅದಕ್ಕೆ ಸೇನೆಯ ಕೊಡುಗೆ ಅಪಾರ. ಭಾರತೀಯ ಸೇನೆಯಲ್ಲಿ ಯೋಧರನ್ನು ಎಂದೂ ಅವರ ಜಾತಿ, ಮತದ ಆಧಾರದ ಮೇಲೆ ನೋಡಿದ ಇಲ್ಲ.

ಇದೆಲ್ಲ ಗೊತ್ತಿದ್ದೂ ಒವೈಸಿಯಂತಹ ಹರುಕುಬುದ್ಧಿ ನಾಯಕರು ಹುತಾತ್ಮ ಯೋಧರನ್ನು ಜಾತಿ ಲೆಕ್ಕದಲ್ಲಿ ಎಣಿಸುವ ಕೀಳು ಮಟ್ಟಕ್ಕೆ ಇಳಿಯುವುದು ವಿಷಾದನೀಯ. ಭಾರತೀಯ ಸೇನೆಯನ್ನು ಜಾತಿ ಮಸೂರದಲ್ಲಿ ನೋಡುವ ಇಂತಹ ಹೇಳಿಕೆಗಳು ಇದೇ ಮೊದಲಲ್ಲ. ಈ ಹಿಂದೆ ಕಾರ್ಗಿಲ್ ಯುದ್ಧದಲ್ಲಿ ಮಡಿದವರಲ್ಲಿ ಬಹುಪಾಲು ಯೋಧರು ಮುಸ್ಲಿಮರೇ ಆಗಿದ್ದರು ಎಂದು ಹೇಳಿದ್ದ ಉತ್ತರ ಪ್ರದೇಶದ ಮತ್ತೊಬ್ಬ ವಿಭಜಕ ರಾಜಾರಕಾರಣಿ ಅಜಮ್ ಖಾನ್ ಸಹ ಭಾರೀ ವಿರೋಧ ಎದುರಿಸಬೇಕಾಗಿ ಬಂದಿತ್ತು. ಸಾಮಾನ್ಯವಾಗಿ ಸೇನೆ ಮುಖಂಡರ ಹೇಳಿಕೆಗಳಿಗೆ ಕಿವಿಗೊಡುವುದಿಲ್ಲ. ಅದಕ್ಕೆ ಮನ್ನಣೆಯನ್ನೂ ನೀಡುವುದಿಲ್ಲ.

ಇನ್ನು ವಿವರಣೆ ನೀಡುವುದಂತೂ ದೂರದ ಮಾತು. ಹೀಗಿದ್ದರೂ ಒವೈಸಿಯ ಹೇಳಿಕೆಯನ್ನು ಸೇನೆ ಸ್ಪಷ್ಟವಾಗಿ ಅಲ್ಲಗಳೆದಿದೆ. ಒವೈಸಿಯನ್ನ ಹೆಸರಿಸದೇ ರಾಜಕಾರಣಿಗಳ ಹೇಳಿಕೆಗಳಿಗೆ ತಕ್ಕ ಉತ್ತರ ನೀಡಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ ವೀರ ಯೋಧ ರನ್ನು ನಾವೆಂದೂ ಜಾತಿ ಆಧಾರದಲ್ಲಿ ನೋಡುವುದಿಲ್ಲ. ಹೀಗೆ ಮಾತನಾಡುವವರಿಗೆ ಸೇನೆಯ ಬಗ್ಗೆ ಎಳ್ಳಷ್ಟೂ ಅರಿವಿಲ್ಲ ಎಂದು ಹೇಳುವ ಮೂಲಕ ಉತ್ತರ ಕಮಾಂಡಿನ ಮುಖ್ಯಸ್ಥ ಲೆ.ಜ. ದೇವರಾಜ್ ಅನ್ಬು ಒವೈಸಿಗೆ ತಕ್ಕ ಉತ್ತರವನ್ನೇ ನೀಡಿದ್ದಾರೆ. ವಿವೇಕ ಮರೆಯಾದಾಗ ವಾಸ್ತವ ಮಂಕಾಗುತ್ತದೆ. ಒವೈಸಿಯಂತಹವರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ.

Leave a Reply

Your email address will not be published. Required fields are marked *

two + three =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top