ಸುಕರ್ಮವಾಣಿ: ಕಷ್ಟಗಳಿಗೆ ಮಾತು- ಮಾರ್ಗ

Posted In : ಗುರು

ವಿ.ಡಿ.ಭಟ್ ಕರಸುಳ್ಳಿ (ಶಿರಸಿ)

ನಮ್ಮದು ಕೃಷಿ ಕುಟುಂಬ. ಅನಾದಿಕಾಲದ ಮನೆಯಲ್ಲಿ ನಾವು ವಾಸವಾಗಿ ದ್ದೇವೆ. ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಅತೀ ಸಾಮರಸ್ಯದಿಂದಲೇ ಇದ್ದೇವೆ. ತಂದೆ-ತಾಯಿ, ಅಜ್ಜ-ಅಜ್ಜಿ, ಮುತ್ತಜ್ಜ-ಅಜ್ಜಿಯರ ಪೋಟೋವನ್ನ ಮನೆಯಲ್ಲಿ ಇಟ್ಟುಕೊಂಡಿದ್ದೇವೆ. ಈಗೆಲ್ಲಾ ನಮ್ಮ ಸಂಬಂಧಿಕರು ತೀರಿಹೋದ ವ್ಯಕ್ತಿಗಳ ಫೋಟೋವನ್ನು ವಾಸ್ತು ಬಾಗಿಲ ಹೊರ ಗಡೆ ಇಡಬೇಕು. ಮನೆಯಲ್ಲಿ ಇಡಬಾರ ದು. ಇದರಿಂದ ಪಿತೃಶಾಪ ಉಂಟಾಗಲಿದೆ ಎಂದು ಹೇಳುತ್ತಾರೆ. ನಿತ್ಯವು ದೇವರ ಪೂಜೆ ಆದ ಮೇಲೆ ಹಿರಿಯರಿಗೂ ಹಾಕಿ ನಮಸ್ಕರಿಸಿಯೇ ನಾವು ಮುಂದಿನ ಕಾರ್ಯವನ್ನು ನೆರವೇರಿಸುತ್ತಾ ಬಂದಿ ದ್ದೇವೆ. ಈಗ ನಮಗೆ ಗೊಂದಲವಾಗಿದೆ. ನಮ್ಮ ಮನೆಯ ಹಿರಿಯರ ಫೋಟೋವನ್ನು ಒಳಗಡೆಯಿಂದ ಹೊರಗಡೆ ಹಾಕಲು ಮನಸ್ಸು ಬರುತ್ತಿಲ್ಲ. ಆದರೆ ಒಳಗಡೆ ಇದ್ದರೆ ಅಪಾಯ ಎಂದು ಹೇಳುತ್ತಾರಲ್ಲ ಏನಾದರೂ ದೋಷವಾದರೆ ಎಂಬ ಭಯ ಕಾಡುತ್ತಾ ಇದೆ. ದಯಮಾಡಿ ಮಾರ್ಗ ದರ್ಶನ ಮಾಡಿ. -ನಾರಾಯಣ ಪಿ., ಗುನಗಾ, ಭಟ್ಕಳ

ಅವಿಭಕ್ತ ಕುಟುಂಬದಲ್ಲಿ ಸಾಮರಸ್ಯದಿಂದ ಇರುವುದಕ್ಕೆ ನಿಮ್ಮನ್ನು ಅಭಿನಂದಿಸಲೇಬೇಕು. ನಿಮಗೆ ಒಂದು ಯಕ್ಷ ಪ್ರಶ್ನೆಯ ಹೇಳುತ್ತೇನೆ. ಯಕ್ಷನು ಧರ್ಮರಾಜನಿಗೆ ಹಲವು ಕ್ಲಿಷ್ಟಕರವಾದ ಪ್ರಶ್ನೆಗಳನ್ನು ಕೇಳುತ್ತಾನೆ. ಭೂಮಿಗಿಂತ ವಿಶಾಲವಾದದ್ದು ಯಾ ವುದಿದೆ? ಎಂದು ಕೇಳಿದಾಗ ತಾಯಿ ಎಂದು ಧರ್ಮರಾಜ ಉತ್ತರಿಸುತ್ತಾನೆ. ಆಕಾಶಕ್ಕಿಂತ ಎತ್ತರವಾದದ್ದು ಯಾವುದಿದೆ? ಎಂದಾಗ ತಂದೆ ಎಂದು ಧರ್ಮರಾಜ ಹೇಳುತ್ತಾನೆ. ಇದರಿಂದ ನಾವು ಅರ್ಥ ಮಾಡಿಕೊಳ್ಳಬೇಕಾದದ್ದು ಇಷ್ಟೇ ನಮ್ಮ ಪಾಲಿಗೆ ಅವರೇ ದೇವರು. ‘ಮಾತೃದೇವೂ ಭವ ಪಿತೃದೇವೋ ಭವ’ ಎಂದು ಹೇಳುತ್ತೇವಲ್ಲ. ಇದನ್ನು ಮನದಾಳಕ್ಕೆ ಸೇರಿಸಿಕೊಂಡು, ಕಾರ್ಯ ರೂಪಕ್ಕೆ ತರಬೇಕು. ಅದಕ್ಕಾಗಿ ನೀವು ನಿಮ್ಮ ಮನೆಯ ಹಿರಿಯರ ಮನೆಯಲ್ಲಿ ಇಟ್ಟಿರುವುದರಿಂದ ಯಾವುದೇ ದೋಷ ಬರಲಾ ರದು ಎಂದೇ ತಿಳಿಯಿರಿ. ಇನ್ನು ಮೃತಹೊಂದಿದ ಹಿರಿಯರ ಭಾವಚಿತ್ರವನ್ನು ದಕ್ಷಿಣಕ್ಕೆ ಮುಖವಾಗಿ ಇಡಬೇಕು ಎಂದು ಹೇಳುವು ದಿದೆ. ಇದು ಸಹಜ ತಿಳುವಳಿಕೆಯನ್ನು ಹೊಂದಿದ ನಿಯಮವೇ ವಿನಃ ಶಾಸ್ತ್ರ ಗ್ರಂಥಗಳಲ್ಲಿ ಉಲ್ಲೇಖವಿಲ್ಲ. ಸಹಜವಾಗಿಯೇ ಪಿತೃಗಳು ದಕ್ಷಿಣದ ಮುಖದವರು ಎಂಬ ಕಾರಣಕ್ಕೆ ಶ್ರದ್ಧಾದಿಗಳಲ್ಲಿ ದಕ್ಷಿಣಕ್ಕೆ ಪಿಂಡ ಪ್ರಧಾನಾಧಿಗಳನ್ನು ಮಾಡುವುದಕ್ಕಾಗಿ ಈ ದಿಕ್ಕಿನಲ್ಲಿ ಛಾಯಚಿತ್ರವನ್ನ ಇಡಬೇಕು ಎಂದು ಹೇಳುತ್ತಾರೆ. ಇದರ ಸೌಕರ್ಯಗಳು ಇಲ್ಲದಿದ್ದರೆ ಉಳಿದ ದಿಕ್ಕಿಗೆ ಮುಖವಾಗಿ ಇಟ್ಟಲ್ಲಿ ಅಪರಾಧವಾಗಲಾರದು. ‘ಜೀವಿತೋ ವಾಕ್ಯಕರಣಾತ್’ ಎಂದರೆ ಹಿರಿಯರು ಜೀವಿತವಾಗಿದ್ದಾಗ ಅವರ ಮಾತನ್ನು ಕೇಳುವ ಸೌಜನ್ಯವಾದರೂ ಇರ ಬೇಕೆಂದು, ಇದರಿಂದ ಹಿರಿಯರ ಆರ್ಶೀವಾದ ಸುಲಭದಲ್ಲಿ ದೊರಕುವುದು ಎಂದು ಶಾಸ್ತ್ರ ಹೇಳುತ್ತದೆ. ಆದರೆ ಇಂದು ಸಮಾಜ ದಲ್ಲಿ ಮನೆಯ ಹಿರಿಯರನ್ನು ಗೌರವದಿಂದ ಕಾಣುವ ಪ್ರವೃತ್ತಿಯನ್ನು ಬಿಡುತ್ತಿದ್ದಾರೆ. ಜೀವಿತ ಅವಧಿಯಲ್ಲೇ ಮನೆಯಿಂದಲೇ ಹೊರಹಾಕಿರುವ ಎಷ್ಟೋ ಕುಟುಂಬ ನೋಡುತ್ತೇವೆ. ಹಿರಿಯರ ಬಗ್ಗೆ ಪೂಜ್ಯ ಭಾವ ಇದ್ದ ವ್ಯಕ್ತಿ ಕುಟುಂಬಕ್ಕೆ ಹಿರಿಯರ ಛಾಯಚಿತ್ರವನ್ನ ಎಲ್ಲೇ ಇಟ್ಟರೂ ಪೂಜ್ಯಭಾವ ಬರಲಿದೆ. ಜತೆಗೆ ಅವರ ನೆನಪಾಗುವುದು. ಅದಕ್ಕಾಗಿ ನೀವು ನಿಮ್ಮ ಹಿರಿಯರ ಛಾಯಚಿತ್ರವನ್ನು ಇಟ್ಟ ಜಾಗದಿಂದ ಬದಲಾಯಿಸುವುದು ಬೇಡ. ನಿಮ್ಮ ಈ ಸಾಮರಸ್ಯ ಜೀವನ ಇನ್ನೂ ಹೆಚ್ಚು ಸಮೃದ್ಧ ವಾಗಲಿ.

*ನಾನು ವಿದ್ಯಾರ್ಥಿನಿ. ನನ್ನ ತಂದೆ 30 ನವೆಂಬರ್ 1969 11.30 ಬೆಳಗ್ಗೆ ಹುಟ್ಟಿದ್ದಾರಂತೆ. ಸಮಸ್ಯೆ ಏನೆಂದರೆ ತಂದೆ ಯವರು ಒತ್ತಡದಲ್ಲೇ ಇರುತ್ತಾರೆ. ಕಟ್ಟಡ ಕಟ್ಟುವ ಕಾರ‌್ಯವನ್ನು ನಿರ್ವಹಿಸುತ್ತಾರೆ. ದುರಾಭ್ಯಾಸವನ್ನು ರೂಢಿಸಿ ಕೊಂಡಿದ್ದಾರೆ. ಮನೆಯ ವಿಚಾರದಲ್ಲಿ ಜವಾಬ್ದಾರಿ ಇಲ್ಲ. ಇದಕ್ಕೇನು ಪರಿಹಾರ ಎಂಬುದನ್ನ ತಿಳಿಸಿ. -ನಿಧಿ ನಾಗರಾಜ್, ಬೇಡ

ನಿಮ್ಮ ಈ ಸಮಸ್ಯೆಗೆ ಶಾಸ್ತ್ರದ ಪರಿಹಾರಕ್ಕಿಂತಲೂ ವ್ಯವಹಾರಿಕವಾಗಿ ಪರಿಹಾರವನ್ನ ಮಾಡಿಕೊಳ್ಳುವುದನ್ನ ಹೇಳಿದರೆ ಸೂಕ್ತ ಎಂಬುದು ತಿಳಿಯುತ್ತದೆ. ಆಶ್ಲೇಷಾ ನಕ್ಷತ್ರವಾಗಿದ್ದು, ಈಗ ಚಂದ್ರದೆಸೆ ನಡೆಯುತ್ತಿದ್ದು. ಮನೋ ಉದ್ವೇಗ ಸಹಜವಾಗಿರುತ್ತದೆ. ಆದರೆ ಇದನ್ನೆ ಎಲ್ಲಾ ದೋಷಕ್ಕೂ ವ್ಯಾಪಿಸಿಕೊಂಡಿರುವುದು ದುಃಖದ ಸಂಗತಿ. ನಿಮ್ಮ ಕುಟುಂಬದ ಈ ಸಂಕಷ್ಟ ನಿವಾರಣೆಗಾಗಿ ಸಂಕಷ್ಟ ವೃತವನ್ನ ಆಚರಿಸಿ. ಸಂಕಷ್ಟಿಯ ದಿನ ಚಂದ್ರದರ್ಶನ ಮಾಡಿಯೇ ಊಟವನ್ನು ಮಾಡಿ. ದುರಾಭ್ಯಾಸವನ್ನ ಬಿಡಲು ಆಗ ಮನೋಬಲ ಹೆಚ್ಚಾಗಲಿದೆ. ದುರಾಭ್ಯಾಸ ಸಹಜವಾಗಿಯೇ ಉದ್ಯೋಗದಲ್ಲಿ ಆಗುವ ಉದ್ವೇಗವನ್ನು ಎದುರಿಸಲು ಶಕ್ತರಾಗು ತ್ತಾರೆ. 2018 ಸಪ್ಟೆಂಬರ್‌ನಿಂದ ನಿಮ್ಮ ತಂದೆಯವರ ಮನೋ ವೃತ್ತಿ ಬದಲಾಗಿ ಶುಭ ಫಲವನ್ನ ಹೊಂದಲಿದ್ದಾರೆ. ದುರಾಭ್ಯಾಸ ಬಿಡಲು ಮನೋ ವೈದ್ಯರ ಸಲಹೆಯನ್ನೂ ತೆಗೆದುಕೊಳ್ಳಿ.

ವಿವಾಹವಾಗಿ ಮೂರು ವರ್ಷವಾಯಿತು. ಜಾತಕವನ್ನು ಕೇಳಿಸಿಯೇ ವಿವಾಹ ಆಗಿದ್ದೇವೆ. ದಾಂಪತ್ಯದಲ್ಲಿ ಭಿನ್ನಾಭಿ ಪ್ರಾಯ, ಪ್ರೀತಿ, ವಿಶ್ವಾಸ ಎಲ್ಲವೂ ಇದೆ. ಸಂತಾನವೂ ಆಗಿದೆ. ಶುಭ ದಿನದಲ್ಲೇ ವಿವಾಹವಾಗಿದ್ದೇವೆ. ತಾಳಿ ಕಟ್ಟುವ ವೇಳೆ ರಾಹುಕಾಲವಾಗಿತ್ತು. ಇದರಿಂದ ಏನಾದರೂ ದೋಷ ವಿದೆಯೇ.  –ಶಂಕರನಾರಯಣ ಪಿ.ವಿ. ಕಡೂರು

ರಾಹುಕಾಲವು ಪ್ರಯಾಣಕ್ಕೆ ಹೇಳಿದೆಯೇ ವಿನಃ ಉಳಿದ ಯಾವ ಕಾರ‌್ಯಕ್ಕೂ ಅದನ್ನು ಪರಿಗಣಿಸಬೇಕಾಗಿಲ್ಲ. ವಿವಾಹ ವಿಚಾರ ವಾಗಿ 27 ನಕ್ಷತ್ರಗಳಲ್ಲಿ 11 ನಕ್ಷತ್ರದ ದಿನಗಳಲ್ಲಿ ವಿವಾಹ ಶುಭ. ಜತೆಗೆ ಶುಭ ವೇಳೆಯನ್ನು ನಿಗದಿಪಡಿಸಿದ್ದಾರೆ. ಅದಕ್ಕೆ ಲಗ್ನ ಎಂದು ಹೇಳುತ್ತಾರೆ. ಒಳ್ಳೆಯ ದಿನ- ಒಳ್ಳೆಯ ಲಗ್ನ ಸಿದ್ಧಿಯಾದಾಗ ವಿವಾಹವನ್ನ ನೇರವೇರಿಸಲು ಪ್ರಾಜ್ಞರು ನಿರ್ಧರಿಸುತ್ತಾರೆ. ಆಗ ರಾಹು ಕಾಲ ಬಂದರೂ ಅದನ್ನ ಪರಿಗಣಿಸಬೇಕಿಲ್ಲ. ಸಂಸಾರ ಎಂದರೆ ಸಹಮತ-ಭಿನ್ನಮತ, ಪ್ರೀತಿ-ವಿಶ್ವಾಸ, ವೈಮನಸ್ಸು ಇವೆಲ್ಲದಕ್ಕೆ ನಿಮ್ಮ ತಿಳಿವಳಿಕೆ ಕಾರಣವಾಗಿರುತ್ತದೆಯೇ ವಿನಃ ಇನ್ನಾವುದೋ ಸಂಗತಿಯನ್ನ ಆಲೋಚಿಸುವುದು ಬೇಡ. ಈಗ ರಾಹುಕಾಲದ ಪೂಜೆಗೆ ಮೂಲ ಆಧಾರಗಳೇ ಇಲ್ಲ. ಸಂಸಾರದಲ್ಲಿ ಭಿನ್ನಾಭಿಪ್ರಾಯವನ್ನ ಗೌಣಗೊಳಿಸಿಕೊಂಡು ಪ್ರೀತಿ-ವಿಶ್ವಾಸವನ್ನ ವೃದ್ಧಿಸಿ ಕೊಳ್ಳಿ. ರಾಹುವಿನ ಭಯವನ್ನ ಬಿಟ್ಟು ಬಿಡಿ.

Leave a Reply

Your email address will not be published. Required fields are marked *

fifteen − six =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top