ಮಳೆಯ ರೌದ್ರನರ್ತನಕ್ಕೆ ಭರ್ತಿಯಾದಳು ಕಪಿಲೆ!

Posted In : ಮೈಸೂರು, ರಾಜ್ಯ

ಮೈಸೂರು: ಉತ್ತಮ ಮಳೆಯಾಗುತ್ತಿದ್ದು, ನದಿಗಳು ತುಂಬಿ ಹರಿಯುತ್ತಿದೆ. ಮೈಸೂರಿನಲ್ಲಿ ಉತ್ತಮ ಮುಂಗಾರು ಮಳೆಯಿಂದಾಗಿ ಕಪಿಲೆ ತುಂಬಿ ಹರಿಯುತ್ತಿದೆ. ಇದರಿಂದಾಗಿ ಎಚ್.ಡಿ.ಕೋಟೆ ಮತ್ತು ನಂಜನಗೂಡು ತಾಲೂಕುಗಳು ಪ್ರವಾಹದ ಭೀತಿ ಎದುರಿಸುತ್ತಿದೆ.

ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದಿಂದ 50 ಸಾವಿರ ಕ್ಯೂಸ್ಸ್ೆಗೂ ಹೆಚ್ಚಿನ ನೀರನ್ನು ನದಿಗೆ ಬಿಟ್ಟಿರುವುದರಿಂದ ಕಬಿನಿ ಜಲಾಶಯ ಸಮೀಪದ ಸೇತುವೆಗಳು ಮುಳುಗಿ ಹೊಗಿವೆ. ನಂಜನಗೂಡು ದೇವಸ್ಥಾನದ ಸ್ನಾನಘಟ್ಟ, ಹದಿನಾರುಕಾಲು ಮಂಟಪಗಳು ಮುಳುಗಡೆಯಾಗಿ ಜನರಲ್ಲಿ ಆತಂಕ ಸೃಷ್ಟಿಸಿದೆ.

ಹೇಮಾವತಿ ಜಲಾಶಯದ ನೀರಿನ ಹೆಚ್ಚಿದ್ದು, ಸುತ್ತೂರು ಸೇತುವೆಯೂ ಮುಳುಗುವ ಹಂತದಲ್ಲಿದೆ. ಎರಡೂ ತಾಲೂಕಿನ ನದಿಪಾತ್ರದ ರೈತರ ಜಮೀನುಗಳಿಗೆ ನೀರು ನುಗ್ಗಿದೆ. ಹಲವು ವರ್ಷಗಳ ಬಳಿಕ ಕಬಿನಿ ಜಲಾಶಯದಲ್ಲಿ 50 ಸಾವಿರ ಕ್ಯೂಸ್ಸ್ೆಗೂ ಹೆಚ್ಚು ನೀರನ್ನು ಹೊರಬಿಡಲಾಗಿದೆ. ಕಬಿನಿ ಜಲಾಶಯದ ಎದುರಿರುವ ಬೀಚನಹಳ್ಳಿ ಮತ್ತು ಎನ್.ಬೇಗೂರು ಸೇತುವೆ ಸಂಪೂರ್ಣ ಜಲಾವೃತಗೊಂಡಿವೆ. ಮಾದಾಪುರ-ಕೆ.ಬೆಳತ್ತೂರು ರಸ್ತೆ ಮಧ್ಯದ ಸೇತುವೆ ನೀರಿನಲ್ಲಿ ಮುಳುಗಿದ್ದು, ಎರಡೂ ಸೇತುವೆಗಳಲ್ಲಿ ಸಂಚಾರ ನಿಷೇಧಿಸಲಾಗಿದೆ.

ಕೇರಳದ ವೈನಾಡು ಮತ್ತು ತಾಲೂಕಿನಲ್ಲಿ ಮಳೆ ಹೆಚ್ಚಿದ್ದು ಮುಂದಿನ ದಿನಗಳಲ್ಲಿ ಭಾರೀ ಮಳೆ ಬರುವ ಸಾಧ್ಯತೆಗಳಿದ್ದು, ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರ ಬಿಡುವ ಸಾಧ್ಯತೆಗಳಿವೆ. ನಂಜನಗೂಡಿನಲ್ಲಿಯೂ ಪ್ರವಾಹ ಭೀತಿ ಎದುರಾಗಿದ್ದು, ಪರಶುರಾಮ ದೇಗುಲ, ಹದಿನಾರು ಕಾಲುಮಂಟಪಗಳು ಜಲಾವೃತಗೊಂಡಿವೆ. ಸಾರ್ವಜನಿಕರು ನದಿಗೆ ಇಳಿಯದಂತೆ ಸೂಚಿಸಲಾಗಿದೆ. ಈ ಬಗ್ಗೆ ಮೈಸೂರು ಜಿಲ್ಲಾಡಳಿತ ಹಾಗೂ ನಂಜನಗೂಡು ತಾಲೂಕು ಆಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.

Leave a Reply

Your email address will not be published. Required fields are marked *

five × 5 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top