ಮೋಕ್ಷ ಧಾಮ ಸಾವಿನ ನಿರೀಕ್ಷೆಯ ತಾಣ

Posted In : ಗುರು

ಭವದಿ

ಕಾಶಿಯಲ್ಲಿ ದೇಹ ಮೋಕ್ಷ ಸಾಧ್ಯವೆಂಬ ನಂಬಿಕೆಯುಳ್ಳವರಿಗೆಂದೇ ವಾರಣಾಸಿಯಲ್ಲಿ ಅತಿಥಿಗೃಹಗಳಿವೆ. ಅಲ್ಲಿ ಜನ ಕೋಣೆ ಯನ್ನು ಬಾಡಿಗೆಗೆ ತೆಗೆದುಕೊಂಡು, ಸಾವಿಗಾಗಿ ಕಾಯುತ್ತಾ ಕುಳಿತಿರುತ್ತಾರೆ. ಕಾಲನ ಕರೆ ಬಂದಾಕ್ಷಣ ದೇಹ ವೆಂಬ ಹಳೆ ಅಂಗಿ ಯನ್ನು ಕಳಚಿ ಕಾಣದ ಲೋಕಕ್ಕೆ ಪಯಣಿಸುತ್ತಾರೆ. ಈ ರೀತಿ 12,000 ಮೋಕ್ಷ ಮಾರ್ಗ ಆಕಾಂಕ್ಷಿ ಗಳನ್ನು ಕಂಡವನು ಈ ಅತಿಥಿ ಗೃಹದ ನಿರ್ವಾಹಕ ಭೈರವನಾಥ ಶುಕ್ಲ. ಒಬ್ಬ ದಾರ್ಶನಿಕನಂತಿರುವ ಈತನ ಕೆಲವು ಅನುಭವದ ಸಾರ ಇಲ್ಲಿದೆ.

ಕಾಶಿ ಮೋಕ್ಷಕ್ಕೆ ದಾರಿ ಅನ್ನುವುದು ಹಿಂದೂವಿನ ನಂಬಿಕೆ. ಹೀಗಾಗಿಯೇ ಹಿಂದೆಲ್ಲಾ ತನ್ನ ಸಾವು ಕಾಶಿ ಅಥವಾ ವಾರಣಾಸಿಯಲ್ಲಿ ಗತಿಸಲಿ ಎಂಬ ಆಕಾಂಕ್ಷೆಯನ್ನು ಜನರದ್ದಾಗಿತ್ತು. ಹಳೆಯ ಅಂಗಿ ಕಳಚಿ ಹೊಸ ಅಂಗಿ ತೊಟ್ಟಂತೆ, ಹೊಸ ಜನ್ಮವನ್ನು ಪಡೆಯಬೇಕೆಂದಿದ್ದರೆ, ಸಾವಿನ ಈ ಮೂಲಕ ಈ ಜನ್ಮದ ದೇಹವನ್ನು ಆತ್ಮ ತ್ಯಜಿಸಬೇಕೆನ್ನುವುದು ಕರ್ಮದ ಸಿದ್ದಾಂತ. ಇದನ್ನೇ ಮೋಕ್ಷವೆನ್ನುವುದು. ಇಂತಹ ನಂಬಿಕೆಯುಳ್ಳವರಿಗೆಂದೇ ವಾರಣಾಸಿಯಲ್ಲಿ ಅತಿಥಿಗೃಹಗಳಿವೆ. ಅಲ್ಲಿ ಜನ ಕೋಣೆಯನ್ನು ಬಾಡಿಗೆಗೆ ತೆಗೆದುಕೊಂಡು, ಸಾವಿಗಾಗಿ ಕಾಯುತ್ತಿರುತ್ತಾರೆ. ಕಾಲನ ಕರೆ ಬಂದಾಕ್ಷಣ ಭವ ಮುಕ್ತರಾಗಿ ಕಾಣದ ಲೋಕಕ್ಕೆ ಪಯಣಿ ಸುತ್ತಾರೆ. ಈ ರೀತಿ 12,000 ಜನರಿಗೆ ಸದ್ಗತಿ ಲಭಿಸಲು ಕಾರಣಕತೃವಾದವನು ಈ ಅತಿಥಿಗೃಹದ ನಿರ್ವಾಹಕ ಭೈರವನಾಥ ಶುಕ್ಲ.

ವಾರಣಾಸಿಯಲ್ಲಿ ದೇಹ ತ್ಯಜಿಸುವ ಬಯಕೆಯುಳ್ಳವರಿಗೆಂದೇ ಮೂರು ಅತಿಥಿ ಗೃಹಗಳಿವೆ. ಅವುಗಳು ಕಾಶಿ ಲಾಭ ಮುಕ್ತಿ ಭವನ, ಮುಮುಕ್ಷು ಭವನ ಹಾಗೂ ಗಂಗಾ ಲಾಭ್ ಭವನ್. 1908ರಲ್ಲಿ ಇದು ವಾರಣಾಸಿಯ ಹೊರವಲಯದಲ್ಲಿ ನಿರ್ಮಾಣಗೊಂಡಿದೆ. 16 ದಿನಗಳ ಕಾಲ ಇಲ್ಲಿರಲು ಅವಕಾಶವಿದೆ. ನಂತರ ನಿರ್ವಾಹಕನ ಅನುಮತಿಯ ಮೇರೆಗೆ ಇಲ್ಲಿ ಸುಮಾರು 44 ವರ್ಷಗಳಿಂದ ಭೈರ ವನಾಥ ಶುಕ್ಲ ಮುಕ್ತಿ ಭವನದ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸು ತ್ತಿದ್ದಾನೆ. ಸಾವಿಗಾಗಿ ಕಾಯುತ್ತಿರುವವರಿಗೆ, ಶಾಂತಿ ಬಡವ, ಬಲ್ಲಿದರೆಂಬ ಬೇಧ ವಿಲ್ಲದೆ ನೆಮ್ಮದಿಯ ವಾತಾವರಣವನ್ನು ಕಲ್ಪಿಸುತ್ತಾನೆ. ಸಮೀಪದಲ್ಲಿರುವ ಕಲ್ಲು ಬೆಂಚಿನಲ್ಲಿ ಕುಳಿತು ಇಹಲೋಕದ ವ್ಯಾಮೋ ಹ ಕಳಚಿಕೊಂಡವರಿಗೆ ಸಂಗಾತಿಯಾಗಿರುತ್ತಾನೆ.

12,000 ಸಾವನ್ನು ಕಣ್ಣ ಮುಂದೆ ಕಂಡಂತಹ ಶುಕ್ಲಾನ ನೆನಪಿನಂಗಳದಲ್ಲಿ ಹಚ್ಚ ಹಸಿರಾಗಿ ಕುಳಿತವರೆಂದರೆ ಶ್ರೀ ರಾಮ್ ಸಾಗರ್ ಮಿಶ್ರ. ಸಂಸ್ಕೃತ ಉಪನ್ಯಾಸಕರಾಗಿದ್ದ ಮಿಶ್ರ ತನ್ನ ಕೊನೆಯ ದಿನಗಳಲ್ಲಿ ವಾರಣಾಸಿಗೆ ಆಗಮಿಸಿ, ಭವನದ ರೂಮ್ ನಂ 3ನ್ನು ಬಾಡಿಗೆಗೆ ಪಡೆದಿದ್ದರು. ಅಲ್ಲಿಗೆ ಕಾಲಿಟ್ಟ 16ನೇ ದಿನ ತಾನು ದೇಹತ್ಯಾಗ ಮಾಡುವೆನೆಂಬ ಬಲವಾದ ನಂಬಿಕೆ ರಾಮ್ ಸಾಗರ್ ಮಿಶ್ರ ಅವರದಾಗಿತ್ತು. 14 ನೇ ದಿನ ಸಮೀಪಿಸುತ್ತಿದ್ದಂತೆ ‘ತನ್ನ 40 ವರ್ಷ ವಯಸ್ಸಿನ ಸಹೋದರನನ್ನು ದಯವಿಟ್ಟು ಇಲ್ಲಿಗೆ ಬರಮಾಡು. ಸಹೋದರ ಹಾಗೂ ತನ್ನ ನಡುವಿನ ಶತ್ರುತ್ವಕ್ಕೆ ನಾಂದಿ ಹಾಡಬೇಕು. ಇಲ್ಲವಾದಲ್ಲಿ ಮನಸ್ಸಿನಲ್ಲಿ ಕಹಿಯಿನ್ನೂ ಉಳಿದುಕೊಂಡು ಹೃದಯದಲ್ಲಿ ಭಾರ ಹಾಗೇ ಉಳಿದು ಬಿಡುತ್ತದೆ. ಇದು ತನ್ನ ಅಡ್ಡಿಯಾಗಬಹುದೆಂದು’ ಶುಕ್ಲಾಗೆ ಆದೇಶಿಸು ತ್ತಾರೆ. ಕೂಡಲೇ ಮಿಶ್ರಾರ ಸಹೋದರನಿಗೆ ಪತ್ರ ಬರೆಯಲಾಗುತ್ತದೆ. 16 ನೇ ದಿನ ಮಿಶ್ರಾರ ಸಹೋದರ ಆಗಮಿಸುತ್ತಾನೆ.

ಮಿಶ್ರಾ ಆತನ ಎರಡೂ ಹಸ್ತಗಳನ್ನು ಗಟ್ಟಿಯಾಗಿ ಹಿಡಿದು ‘ಮನೆಯನ್ನು ಬೇರ್ಪಡಿಸಿದ ಗೋಡೆಯನ್ನು ಕೆಡವು. ಈ ಮೂಲಕ ಎರಡೂ ಕುಟುಂಬ ಒಂದಾಗಲಿ. ತನ್ನ ತಪ್ಪುಗಳನ್ನೆಲ್ಲಾ ಕ್ಷಮಿಸು’ ಎಂದು ಬೇಡಿಕೊಳ್ಳುತ್ತಾರೆ. ಇಬ್ಬರ ಕಂಗಳಲ್ಲೂ ಕಣ್ಣೀರ ಸುಧೆ. ಕೆಲವೇ ಕ್ಷಣಗಳಲ್ಲಿ ಮಿಶ್ರಾರ ಮುಖ ಶಾಂತವಾಯಿತು. ಪ್ರಾಣವಾಯು ದೇಹದಿಂದ ಮರೆಯಾಯಿತು.

ಈ ಘಟನೆಯ ಬಗ್ಗೆ ಹೇಳುವುದು ಹೀಗೆ. ‘ಜನ ಅನಗತ್ಯವಾಗಿ ಇಲ್ಲದ ಹೊರೆಯನ್ನು ತಮ್ಮ ಜತೆಗೆ ಜೀವನ ಪೂರ್ತಿ ಕೊಂಡೊ ಯ್ಯುತ್ತಾರೆ. ಇದರ ಅಗತ್ಯತೆಯಿದೆಯೇ? ಜೀವನ ಯಾತ್ರೆಯ ಕೊನೆಯ ಕ್ಷಣದಲ್ಲಿ ಅವೆಲ್ಲ ಸೇರಿ, ಹೊರಲಾರದ ಭಾರವಾಗಿ ಪರಿಣ ಮಿಸುತ್ತದೆ. ಅಲ್ಲಲ್ಲಿಯೇ ಎಲ್ಲಾ ಭಾರವನ್ನೂ ಕಳಚಿಕೊಂಡು ಮುಂದಕ್ಕೆ ಸಾಗುತ್ತಿದ್ದರೆ, ಬದುಕು ಸರಳವಾಗಿ ಬಿಡಬಹುದು.’

ಮುಕ್ತಿ ಭವನ ತನ್ನ ಹೆಸರಿನಂತೆ, ಭವದ ಬಂಧನವನ್ನು ತ್ಯಜಿಸಲು ಆತ್ಮವನ್ನು ಸತ್ಕರ್ಮದೆಡೆಗೆ ಕೊಂಡೊಯ್ಯಲು ತಯಾರು ಮಾಡುತ್ತದೆ. ದಿನದಲ್ಲಿ ಮೂರು ಬಾರಿ ಭಕ್ತಿ ಭಾವದಿಂದ ಕೂಡಿದ ಗೀತೆಗಳನ್ನು ಕೇಳಿಸಲಾಗುತ್ತದೆ. ಕೆಲವರಂತೂ ಇಂತಹ ಸಂಗೀತ ಉಪಕರಣ, ಹಾಡುಗಳನ್ನು ಎಂದೂ ಕೇಳಿರಲಾರೆ ಅನ್ನುವ ಭಾವದಿಂದ ಸಂಗೀತದಲ್ಲಿ ಒಂದಾಗುತ್ತಾರೆ. ಧ್ಯಾನಮಗ್ನ ರಾಗಿ ಅದರ ಸುಖವನ್ನು ಆಸ್ವಾದಿಸುತ್ತಾರೆ.

‘ಬಾಳ ಕೊನೆಯ ಗಳಿಗೆಯಲ್ಲಿರುವವರು ಯಾರೊಂದಿಗೂ ಮಾತನಾಡಲಾರರು, ನಡೆಯಲಾರರು ಹಾಗೂ ಸಂವಹಿಸಲಾರರು. ಆದರೆ ಮನಸ್ಸು ಮಾತ್ರ ಹಿಂದಕ್ಕೋಡಿರುತ್ತದೆ. ಕಳೆದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ತಾವು ಮುಗ್ಗರಿಸಿದ್ದು, ನೋಯಿಸಿದ್ದು, ಇತರರ ಕಣ್ಣೀರಿಗೆ ಕಾರಣವಾಗಿದ್ದು. ಹೀಗೆ ಅಂತರಾತ್ಮ ತನ್ನನ್ನು ತಾನು ಪರಾಮರ್ಶಿಸತೊಡಗುತ್ತದೆ. ಎಲ್ಲವನ್ನೂ ತೊರೆದು ಆತ್ಮ ಶುಭ್ರವಾಗಬೇಕು ಎಂಬ ಮನದಲ್ಲಿ ಬಲವಾಗುತ್ತದೆ’ ಎಂದು ಭೈರವನಾಥ್ ಶುಕ್ಲಾ ಒಬ್ಬ ದಾರ್ಶನಿಕನಂತೆ ಅಂತರಾತ್ಮದ ಅಳಲನ್ನು ನಮ್ಮ ಮುಂದಿಡುತ್ತಾನೆ.

ಇನ್ನೊಂದು ಘಟನೆಯನ್ನು ಶುಕ್ಲಾ ಸಾದೃಶ್ಯ ಪಡಿಸುವುದು ಹೀಗೆ. ಒಮ್ಮೆ 80 ವರ್ಷದ ಮುದುಕಿಯೊಬ್ಬಳನ್ನು ಆಕೆಯ ಮೊಮ್ಮ ಕ್ಕಳು ಮುಕ್ತಿ ಭವನದ ಒಳಗೆ ಬಿಟ್ಟು ಹೋಗಿರುತ್ತಾರೆ. ಅಲ್ಲಿನ ನಿಯಮದಂತೆ ಅರ್ಜಿ ನಮೂನೆ ತುಂಬಿಸಿರುವುದಿಲ್ಲ. ‘ಈಕೆಯ ಪೂರ್ವಾಪರ ತಿಳಿದಿಲ್ಲ. ನಮ್ಮ ಗಮನಕ್ಕೆ ಬಾರದಂತೆ ಇವರ ಮನೆಯವರು ಬಿಟ್ಟು ಹೋಗಿದ್ದಾರೆ’ ಎಂದು ಪೊಲೀಸ್‌ರಿಗೆ ದೂರು ನೀಡಲಾಗುತ್ತದೆ. ಈ ಅಜ್ಜಿಯ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದವರೆಂದು ಕೊನೆಗೆ ತಿಳಿಯುತ್ತದೆ. ಕೆಲವೇ ದಿನಗಳಲ್ಲಿ ಮೊಮ್ಮಕ್ಕಳು ಅಜ್ಜಿಯನ್ನು ನೋಡಲು ಬರುತ್ತಾರೆ. ಆಗ ಶುಕ್ಲಾ ‘ನಿಮ್ಮ ಬಂದೂಕಿನಿಂದ ಅದೆಷ್ಟೋ ಜನರನ್ನು ನೀವು ಸಾಯಿಸು ತ್ತೀರಿ. ಸ್ವತಃ ನಿಮ್ಮ ಸಾವನ್ನು ನೀವೇ ತಂದುಕೊಳ್ಳುತ್ತೀರಿ. ಹೀಗಿದ್ದೂ ಅಜ್ಜಿಯನ್ನು ಇಲ್ಯಾಕೆ ಬಿಟ್ಟು ಹೋಗಿದ್ದೀರ. ನಿಮ್ಮ ಬಂದೂಕಿನಿಂದಲೇ ಅಜ್ಜಿಯ ಕೊನೆಯುಸಿರನ್ನು ನಿಲ್ಲಿಸಿ ಸದ್ಗತಿ ನೀಡಬಹುದಲ್ವಾ’ ಎಂದು ಕೇಳುತ್ತಾನೆ.

ಆಗ ಮೊಮ್ಮಕ್ಕಳು ‘ನಮ್ಮಂತ ಪಾಪಿಗಳ ಜತೆಗಿದ್ದರೆ ಅಜ್ಜಿಗೆ ಸದ್ಗತಿ ದೊರೆಯದು ಎನ್ನುವ ಕಾರಣಕ್ಕೆ ಇಲ್ಲಿ ಹೋಗಿದ್ದೇವೆ’ ಎಂದನ್ನುತ್ತಾರೆ. ತಮ್ಮಜ್ಜಿ, ಧಾರ್ಮಿಕ ರೀತಿಯಲ್ಲಿ ಮುಕ್ತಿ ಮಾರ್ಗ ಪಡೆಯಲು ತಮ್ಮ ಕೈಲಾದ ಮಟ್ಟಿನ ಪ್ರಯತ್ನ ಆ ಮೊಮ್ಮಕ್ಕ ಳದ್ದು. ಸಾವಿರಾರು ಜನ, ಮೋಕ್ಷ ಆಕಾಂಕ್ಷಿಗಳು ದಿನ ನಿತ್ಯ ಮುಕ್ತಿ ಭವನಕ್ಕೆ ಆಗಮಿಸುತ್ತಲೇ ಇರುತ್ತಾರೆ. ಹೀಗೆ ಶುಕ್ಲಾ ಒಬ್ಬ ವೇದಾಂತಿ, ಸ್ನೇಹಿತ , ಬಂಧುವಾಗಿ ಅವರ ಕೊನೆ ಕ್ಷಣಕ್ಕೆ ಸಾಕ್ಷಿಯಾಗಿ ಉಳಿಯುತ್ತಾನೆ.

ಕಾಶಿಯ ಕರವತ್ ದೇಗುಲ
ಕಾಶಿಯಲ್ಲಿ ಕರವತ್ ಶಿವ ದೇವಾಲಯ ಇದೆ. (ಕರವತ್ ಅಂದರೆ ಖಡ್ಗ ಆಯುಧ ಗರಗಸ). ಆ ದೇಗುಲಕ್ಕೊಂದು ವಿಶಿಷ್ಟ ಹಿನ್ನೆಲೆ ಮತ್ತು ಕತೆ ಉಂಟು! ಕಾಶಿಯಲ್ಲಿ ಸತ್ತರೆ ಮೋಕ್ಷಕ್ಕೆ ಹೋಗಬಹುದು ಎಂಬ ನಂಬಿಕೆಯಿಂದ ಸಾವಿರಾರು ಜನ ಕಾಶಿಗೆ ಬರು ತ್ತಿದ್ದರು, ಬರುತ್ತಿದ್ದಾರೆ. ಒಂದು ವೇಳೆ, ಸಹಜ ಸಾವು ಬರದೇ, ಈ ಜನ್ಮದ ನಂಟು ಇನ್ನೂ ಮುಂದುವರಿದರೆ? ಅಂತಹವರು, ಸಾಕಪ್ಪಾ ನಮಗೆ ಇಹಲೋಕದ ಸಹವಾಸ, ದೇಹತ್ಯಾಗ ಮಾಡೋಣ ಎಂದು ಬಯಸಿದರೆ? ಅಂತವರ ಸಹಾಯಕ್ಕೆ ಬರುತ್ತಿದ್ದ ವರು, ಈ ಕರವತ್ ದೇವಾಲಯದ ಪೂಜಾರಿಗಳು.

ಆ ಶಿವ ದೇಗುಲದಲ್ಲಿರುವ ನೆಲ ಸುಮಾರು 30 ಅಡಿ ಆಳದಲ್ಲಿ ಶಿವಲಿಂಗ ಇದೆ. ಮೇಲಿನಿಂದ ಶಿವಲಿಂಗದ ಹತ್ತಿರಕ್ಕೆ ನೆಗೆದರೆ, ಶಿವನ ಸಾನಿಧ್ಯದಲ್ಲೇ ಸಾವು ದೊರೆಯುವುದು ಎಂದು ಪೂಜಾರಿಗಳ ಅಂಬೋಣ. 16-17 ನೆಯ ಶತಮಾನದ ತನಕ, ಅಲ್ಲಿಂದ ಜನರು ನೆಗೆದು, ಪ್ರಾಣತ್ಯಾಗ ಮಾಡುವ ಪದ್ದತಿ ಇತ್ತು ಎಂದು ದಾಖಲಾಗಿದೆ. ಶಿವಲಿಂಗದ ಹತ್ತಿರವೇ, ಕಬ್ಬಿಣದ ಖಡ್ಗ ಅಥವಾ ಗರಗಸ ಇದ್ದು, ಮೇಲಿನಿಂದ ಬಿದ್ದ ಜನರು ಅದರ ಮೇಲೆ ಬೀಳುವುದರಿಂದಾಗಿ, ಸಾವನ್ನಪ್ಪುತ್ತಿದ್ದರು. ಆ ನೆಲಮಾಳಿಗೆಯ ಕೆಳಗೆ ಗಂಗಾ ನದಿಗೆ ಸಹ ಇದೆ ಎನ್ನುತ್ತಾರೆ ಅಲ್ಲಿನ ಪೂಜಾರಿ. ಮೋಕ್ಷವನ್ನು ಪಡೆಯುವ ಅತಿಯಾದ ಹಂಬಲ ಹೊಂದಿದ ಅಮಾಯಕ ಭಕ್ತರನ್ನು, ಪೂಜಾರಿಗಳು ಹೇಗಾದರೂ ಮನವೊಲಿಸಿ, ಈ ಸ್ಥಳದಲ್ಲಿ ಪ್ರಾಣತ್ಯಾಗ ಮಾಡಿಸುತ್ತಿದ್ದರು ಎಂಬ ಟೀಕೆಯೂ ಇತ್ತು.

ಅಲೆಕ್ಸಾಂಡರ್ ಹ್ಯಾಮಿಟ್ಟನ್ (1744) ಈ ದೇಗುಲದ ವಿಚಾರವನ್ನು ತನ್ನ ಬರಹದಲ್ಲಿ ದಾಖಲಿಸಿದ್ದಾನೆ. ಈ ‘ನೇರಮೋಕ್ಷ’ ಪದ್ದತಿ ಯನ್ನು ಬ್ರಿಟಿಷರು ನಿಷೇಧಿಸಿದರು ಎನ್ನಲಾಗಿದೆ. ಕರವತ್ ದೇಗುಲ ಈಗಲೂ ಕಾಶಿಯಲ್ಲಿದೆ. ಬಹು ಹಿಂದೆ ಮೋಕ್ಷಕ್ಕೆ ನೇರ ಮಾರ್ಗ ಒದಗಿಸುತ್ತಿದ್ದ ಆ ಈಗ ಮಾಮೂಲಿ ಗುಡಿ. ಕಾಶಿಯಲ್ಲಿರುವ ಸಾವಿರಾರು ಇತರ ಸಣ್ಣ ಪುಟ್ಟ ದೇಗುಲಗಳಂತೆಯೇ ಇದೊಂದು ಶಿವ ದೇಗುಲವಾಗಿ ನಿಂತಿದೆ.

Leave a Reply

Your email address will not be published. Required fields are marked *

5 × three =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top