ಇಲ್ಲಿರುವ ಎಲ್ಲ ಮುಸ್ಲಿಮರೂ ಕೆಟ್ಟವರೆ?

Posted In : ಸಂಗಮ, ಸಂಪುಟ

ವಿದ್ಯಮಾನ: ಗುರುರಾಜ್

ದೀಪ ಬೆಳಗಿಸಿ ಬೆಳಕು ಕೊಡಲಾಗದಿದ್ದರೆ ಸುಮ್ಮನಿದ್ದುಬಿಡಬೇಕು ; ಬೆಂಕಿ ಹಚ್ಚಿ ಸುಡುವ ಕೆಲಸಕ್ಕೆ ಕೈ ಹಚ್ಚಬಾರದು.  ಕಾಪಾ ಡಲು ಸಾಧ್ಯವಾಗದಿದ್ದ ಕೈಗಳು, ಕೊಲ್ಲುವ ಕಾಯಕ ಕ್ಕೆ ಮುಂದಾಗಬಾರದು. ನಮ್ಮೆಲ್ಲ ದೇವ-ದೇವಿಯರು, ಅಲ್ಲ-ಅಲ್ಲಮ, ಕ್ರೈಸ್ತ ಕೃಷ್ಣರು ಗಳೆಲ್ಲ ಅವರವರ ಮಂದಿರ, ಮಸೀದಿ, ಚರ್ಚುಗಳ ಒಳಗೆ ಮಾತ್ರವೇ ಕುಳಿತಿರಬೇಕು. ಎಲ್ಲ ಧರ್ಮಗಳಿಗೂ ಗುಡಿಯ ಗೋಡೆಗಳೇ ಗಡಿಗಳಾಗಬೇಕು. ಮನುಜ ಕುಲಂ ತಾನೊಂದೆ ವಲಂ ಎಂದುಕೊಳ್ಳುವ ಮನಸ್ಸುಗಳ ಸಂಖ್ಯೆ ಹೆಚ್ಚಾಗಬೇಕು. ಜಾತಿ, ಮತ, ಧರ್ಮ, ಕೋಮುಗಳಿಗಿಂತಲೂ ಮಾನವೀಯತೆಯೇ ದೊಡ್ಡದೆಂಬ ಪರಮ ಸತ್ಯ ನಮ್ಮೆಲ್ಲರ ಎದೆ ಕದಗಳನ್ನು ತೆರೆದು ಒಳಗಿಣುಕಬೇಕು.ಹೀಗಾದಾಗ ಮಾತ್ರವೇ ಈ ನೆಲದಲ್ಲಿ ಶಾಂತಿಯ ಬೀಜ ಮೊಳಕೆಯೊಡಯಲು ಸಾಧ್ಯ. ಸಮಾಧಾನದ ಚಿಗು ರೊಡೆದು, ಸಹಬಾಳ್ವೆಯ ಹಸಿರು ಹೆಮ್ಮರವಾಗಿ ಟಿಸಿಲೊಡೆಯಲು ಸಾಧ್ಯ.

ಬಹುತ್ವಕ್ಕೆ ಮಾದರಿಯಾದ, ನೂರಾರು ಸಂಸ್ಕೃತಿ, ಜಾತಿ, ಧರ್ಮ,ಪರಂಪರೆಗಳಿಗೆ ಸಾಕ್ಷಿಯಾದ ಭವ್ಯ ಭಾರತದಲ್ಲಿ, ಈಚೀಚೆಗೆ ಧಾರ್ಮಿಕ ಸಂಘರ್ಷಗಳು ಹೆಚ್ಚಾಗುತ್ತಿವೆ. ನಾಲಿಗೆ ಚಪಲದ ದೂರು ಮತ್ತು ಬೈಗುಳಗಳ ಕೆಸರೆರೆಚಾಟ ಮರೆಯಾಗಿ, ಧರ್ಮ ದ್ವೇಷವೆಂಬುದು ಇರಿದಿರಿದು ಕೊಲ್ಲುವಷ್ಟರ ಮಟ್ಟ ಮುಟ್ಟುತ್ತಿವೆ.  ಸಣ್ಣದೊಂದು ಕ್ರಿಮಿಯನ್ನೂ ಸೃಷ್ಟಿಸಲಾಗದ ಮನುಷ್ಯ, ತನ್ನಂತೆ ಯೇ ಇರುವ ಮತ್ತೊಂದು ಜೀವಿಯನ್ನು ಕ್ಷಣಾರ್ಧದಲ್ಲಿ ಹೊಸಕಿ ಹಾಕಬಲ್ಲಷ್ಟು ಕ್ರೂರಿಯಾಗುತ್ತಿದ್ದಾನೆ. ಹೊಂದಿ ಬಾಳಬೇಕಾದ ಹಿಂದೂ-ಮುಸ್ಲಿಮರಿಬ್ಬರೂ ಕೊಂದು ಬದುಕುವ ಆಟಕ್ಕೆ ನಿತ್ಯವೂ ಪಣ ಕಟ್ಟುತ್ತಿದ್ದಾರೆ. ಹಾದಿ-ಬೀದಿಗಳಲ್ಲಿ ಹಸಿ ನೆತ್ತರು ಹರಿಯುತ್ತಿದೆ. ರಾಜಕಾರಣದ ದಾಳಕ್ಕೆ ಪ್ರಾಣಗಳೇ ಹರಣವಾಗುತ್ತಿವೆ. ರಾಜಕಾರಣಿಗಳ ಕೊರಳಿಗೆ ಹೆಣಗಳೇ ಹಾರ ಗಳಾಗುತ್ತಿವೆ. ಅಧಿಕಾರದ ಕೊಳಕು ದಾಹಕ್ಕೆ ಮುಗ್ಧ ಜೀವಗಳು ಬಲಿಯಾಗುತ್ತಿವೆ.

ಇಷ್ಟಾದರೂ ಈ ನೆರಳುಗಳ ಬಾಯಾರಿಕೆ ಇಂಗಿಲ್ಲ. ಕೊಲೆಗಡುಕರ ಮನಸ್ಸುಗಳಿಗೆ ತೃಪ್ತಿಯಾಗಿಲ್ಲ. ಧರ್ಮ-ಧರ್ಮಗಳ ನಡುವೆ ಗುಂಡಿ ತೋಡುವ ಮಂದಿಯ ಸಂಖ್ಯೆ ದಿನ ಕಳೆದಂತೆ ಹೆಚ್ಚುತ್ತಿದೆಯೇ ಹೊರತು, ಕಡಿಮೆಯಾಗುತ್ತಿಲ್ಲ. ನಾವೆಲ್ಲ ನಮ್ಮ-ನಮ್ಮ ಜಾತಿ, ಮತ, ಧರ್ಮಗಳಿಂದ ಗುರುತಿಸಿಕೊಳ್ಳುವಲ್ಲಿ ಹೆಮ್ಮೆ ಪಡುತ್ತಿದ್ದೇವೆಯೇ ಹೊರತು, ನಾವೆಲ್ಲರೂ ಕೇವಲ ಮನುಷ್ಯರು, ಮೊದಲು ಭಾರತೀಯರು ಎಂದು ಕರೆದುಕೊಳ್ಳಲು ಸುತರಾಂ ಸಿದ್ಧರಿಲ್ಲ.

ಒಂದು ವೇಳೆ ಸಾಮಾನ್ಯ ಜನರ ಮನಸ್ಸುಗಳು ಈ ಬಗೆಯ ಸಿದ್ಧಾಂತಗಳಿಗೆ ಹುರಿಗೊಳ್ಳಲು ಸಿದ್ಧವಾದರೂ, ನಮ್ಮ ಸುತ್ತಲೂ ಕತ್ತಲಿನಂತೆ ಕವಿದಿರುವ ಕೆಟ್ಟ,ಅನಿಷ್ಠ ರಾಜಕಾರಣ ಇದಕ್ಕೆ ಆಸ್ಪದವನ್ನೇ ಇದು ಭಾರತ. ವೈವಿಧ್ಯತೆಗಳಲ್ಲಿನ ಏಕತೆಯೇ ಇಲ್ಲಿನ ವಿಶೇಷ. ಕನಸಿನ ಅಂಗಡಿಯೊಂದನ್ನು ಬಟಾ ಬಯಲಿನಲ್ಲಿ ತೆರೆದಿಟ್ಟಷ್ಟು ಸುಂದರ ಮತ್ತು ಲಕ್ಷೋಪಲಕ್ಷ ವೈಶಿಷ್ಟ್ಯಗಳಿಂದ ಶೋಭಿಸುವ ಈ ಸುರ ಸುಂದರ ದೇಶಕ್ಕೆ ಕೋಮು ದಳ್ಳುರಿಯೊಂದು ದೊಡ್ಡ ಶಾಪವಾಗಿ ಪರಿಣಮಿಸಿದೆ. ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಈ ಪೆಡಂಭೂತ ತನ್ನ ಕೈ-ಕಾಲುಗಳನ್ನು ಸಾವಕಾಶವಾಗಿ ಚಾಚಿ, ಮೈ ಮುರಿಯುತ್ತ ಕುಳಿತುಬಿಟ್ಟಿದೆ.

ಹಿಂದೂ-ಮುಸ್ಲಿಮರೆಂಬ ಸೋದರತ್ವ ಕೇವಲ ವೇದಿಕೆಗಳ ಮೇಲಿನ ಭಾಷಣದ ಸರಕಾಗಿ, ಚಪ್ಪಾಳೆಯ ಸದ್ದಾಗಿ ಕಳೆದು ಹೋಗು ತ್ತಿದೆ, ಕರಗಿಹೋಗುತ್ತಿದೆ. ಈ ಎರಡೂ ನಡುವೆ , ಎರಡು ಕಡೆಯವರೂ ಸೇರಿ ಕೆಡವಲಾರದ ಗೋಡೆಯನ್ನು ಈಗಾಗಲೇ ಕಟ್ಟ ಲಾಗಿದೆ. ಮತ್ತಷ್ಟು ಎತ್ತರಿಸುವ ಕೆಲಸವನ್ನು ನಿತ್ಯವೂ ನಡೆಸಲಾಗುತ್ತಿದೆ. ಮುಕುಟಗಳನ್ನೇರಿಸಿಕೊಳ್ಳುವ ಪ್ರಜಾಪ್ರಭುತ್ವದ ಆಟಕ್ಕೆ ಧರ್ಮವೆಂಬ ಕತ್ತಿ ಝಳಪಿಸಲ್ಪಡುತ್ತಿದೆ. ಅವರಿವರ ಕುತ್ತಿಗೆಗಳನ್ನು ಕತ್ತರಿಸುತ್ತಾ, ಗದ್ದುಗೆಗಳನ್ನೇರಲು ನೆತ್ತರಿನ ಹಾದಿ ಯನ್ನು ಸಿದ್ಧಗೊಳಿಸುತ್ತಿವೆ. ಹಿಂದೆಲ್ಲಾ ಹೀಗಿರಲಿಲ್ಲ.

ಊರೂರಿನ ಮಾರಮ್ಮನ ಗುಡಿಗೆ ತಂಪು ಮಾಡಿಕೊಂಡು, ತಳಿಗೆ ತರುತ್ತಿದ್ದ ಮುಸಲ್ಮಾನರ ಮನೆಯ ಹೆಣ್ಣು ಮಕ್ಕಳಿಗೆ , ಉಳಿ ದವರು ಮೊದಲಿಗೆ ಜಾಗ ಮಾಡಿಕೊಡುತ್ತಿದ್ದರು. ಹನುಮಪ್ಪನ ಗುಡಿಗೆ ಮುಸಲ್ಮಾನರ ಮನೆ ಕರೆತಂದು ದೇವರ ತೀರ್ಥ ಪ್ರೋಕ್ಷಿಸಿ ಕೊಂಡು ಹೋಗುತ್ತಿದ್ದ ತಾಯಂದಿರು ಈಗಲೂ ಇದ್ದಾರೆ. ಇಂಥವರ ಸಂಖ್ಯೆ ಈಗ ಕಡಿಮೆಯಾಗಿದೆಯಾದರೂ, ಪದ್ಧತಿಗಳು ನಿಂತು ಹೋಗಿಲ್ಲ. ಮುಸ್ಲಿಮ್ ಪೈಲ್ವಾನರುಗಳು ಗರಡಿ ಮನೆಯಲ್ಲಿ ಸಾಮು ಮಾಡಿ, ದುರ್ಗಾದೇವಿಗೆ ಪೂಜೆ ಮಾಡಿ, ಆಂಜನೇಯ ನಿಗೆ ಮನಸ್ಸಿನಲ್ಲಿಯೇ ವಂದಿಸಿ, ಹುರಿಗಟ್ಟಿ ಹೊಳೆಯುತ್ತಿದ್ದ ತೋಳುಗಳಿಗೆ ತಾಯಿತ ಕಟ್ಟಿಸಿಕೊಂಡು ಹೋಗುತ್ತಿದ್ದುದು ಸಾಮಾ ನ್ಯವಾಗಿತ್ತು.

ಹಿಂದೂ ಮಂದಿ, ದರ್ಗಾಗಳಿಗೆ ಹರಕೆ ಕಟ್ಟಿಕೊಳ್ಳುವ ಕೆಲಸ ಈಗಲೂ ಚಾಲ್ತಿಯಲ್ಲಿದೆ. ತಿರುಪತಿಗೋ, ಧರ್ಮಸ್ಥಳಕ್ಕೋ ಹರಕೆ ಹೊತ್ತು ನಡೆದು ಹೋಗುತ್ತಿದ್ದ ಮಂದಿ ಸಿಗುವ ಮಸೀದಿ,ದರ್ಗಾಗಳಿಗೆ ಕಾಣಿಕೆ ನೀಡಿ, ನಮಸ್ಕಾರ ಮಾಡಿ ಮುಂದುವರಿಯುವ ಆಚರಣೆ ಇನ್ನೂ ಈ ನೆಲದಲ್ಲಿದೆ. ಬಾಬಯ್ಯನ ಉರುಸ್ ಬಂತೆಂದರೆ ಮನೆ-ಮನೆಯಲ್ಲೂ ಸಂಭ್ರಮ ಪಡುವಂಥ ಗ್ರಾಮಗಳು ಈಗಲೂ ನಮ್ಮಲ್ಲಿವೆ. ಉತ್ತರ ಕರ್ನಾಟಕದ ಕೆಲವು ಸಣ್ಣ-ಪುಟ್ಟ ಹಳ್ಳಿಗಳಲ್ಲಿ ಮುಸಲ್ಮಾನರ ಹಬ್ಬಗಳನ್ನು ಇತರೆ ಜನಗಳೇ ಒಟ್ಟುಗೂಡಿ, ದೇಣಿಗೆ ಕೂಡಿಸಿ ಆಚರಿಸುವ ಉದಾಹರಣೆಗಳು ನೂರಾರಿವೆ. ತಮ್ಮ ಹೊಲ-ಗದ್ದೆಗಳನ್ನೇ ಸಾರಿಸಿ, ನಮಾಜು ಮಾಡಲು ಬಿಟ್ಟು ಕೊಡುವ ಸಾವಿರಾರು ಮಂದಿ ಗೌಡರು, ಲಿಂಗಾಯತ ಜಮೀನುದಾರರ ದಂಡೇ ಉತ್ತರ ಬಹುಕಡೆಗಳಲ್ಲಿ ಈಗ ಲೂ ಗೋಚರಿಸುತ್ತದೆ.

ಬಾಬಯ್ಯನಿಗೆ ಹರಕೆ ಕಟ್ಟಿಕೊಳ್ಳುವ ಹಿಂದೂ ಮನೆಗಳ ಹೆಂಗಸರು, ಮಸೀದಿಗೆ ತೆರಳಿ ಸಕ್ಕರೆ ಓದಿಸುವ ಸಂಪ್ರದಾಯ ಈ ದಿನಕ್ಕೂ ಈ ದೇಶದ ಬಹಳೆಡೆಗಳಲ್ಲಿ ಕಾಣಸಿಗುತ್ತದೆ. ಹಳ್ಳಿ-ಹಳ್ಳಿಗಳ ದೇವಾಲಯಗಳಲ್ಲಿ ನಡೆಯುವಂತಹ ಕೆಂಡ-ಕೊಂಡೋತ್ಸವಗಳನ್ನು ಮುಸ್ಲಿಮರೂ ಆಚರಿಸುತ್ತಾರೆ. ದಕ್ಷಿಣ ಕನ್ನಡದ ಕೆಲವು ಪ್ರದೇಶಗಳಲ್ಲಿ ಕೆಂಡದ ಮಳೆಯಂಥ ಹರಕೆಗಳೂ ಜೀವಂತವಿದ್ದ ಬಗ್ಗೆ ಹಳೆಯ ತಲೆಗಳು ಈಗಲೂ ಗುನುಗುತ್ತವೆ.

ಆದರೆ, ಇತ್ತೀಚಿನ ದಿನಗಳಲ್ಲಿ ಹಿಂದೂ ಮುಸ್ಲಿಮರ ನಡುವಿದ್ದ ಈ ಸಾಮರಸ್ಯವನ್ನು ಮುರಿದುಹಾಕಲಾಗುತ್ತಿದೆ. ಪರಸ್ಪರ ದ್ವೇಷಿಗಳೆಂಬಂತೆ ಬಿಂಬಿಸಲಾಗುತ್ತಿದೆ. ದೇವರ ಹಾಡು ಹೇಳಿದಳೆಂಬ ಕಾರಣಕ್ಕೆ ಕನ್ನಡದ ಮುಸ್ಲಿಂ ಯುವತಿಯೊಬ್ಬಳನ್ನು ಮೂಲಭೂತವಾದಿ ಮುಸ್ಲಿಂ ಮನಸ್ಸುಗಳು ಖಂಡ-ತುಂಡವಾಗಿ ಟೀಕಿಸುತ್ತವೆ. ಟೆನಿಸ್ ಆಡುವಾಗ ತುಂಡುಡುಗೆ ತೊಟ್ಟಳೆಂದು ಫತ್ವಾ ಹೊರಡಿಸುತ್ತವೆ. ಮುಸ್ಲಿಮರೂ ನಮ್ಮವರೇ ಎಂಬುದು ಎಷ್ಟು ನಿಜವೋ, ಅವರಲ್ಲಿ ಮೂಲಭೂತವಾದ, ಮತೀಯವಾದ ಮತ್ತು ಅತಿಯಾದ ಅಂಧ ಶ್ರದ್ಧೆಗಳೂ ಸಹ ಹೆಚ್ಚೆಂಬುದು ಅಷ್ಟೇ ಸತ್ಯ.

ಯಾರು ಏನೆಂದರೂ ಸರಿ, ಎಷ್ಟೇ ಕೂಗಾಡಿ, ಹಾರಾಡಿದರೂ ಸರಿ ಬಹಳಷ್ಟು ಮುಸ್ಲಿಮರು ತಮ್ಮನ್ನು ತಾವು ಕೇವಲ ಮನುಷ್ಯ ರೆಂದೇ ಭಾರತೀಯರೆಂದೇ ಗುರುತಿಸಿಕೊಳ್ಳುತ್ತಿದ್ದಾರೆ. ಇಂತಹ ಬೆರಳೆಣಿಕೆಯಷ್ಟು ಮಂದಿಯಿಂದಾಗಿಯೇ ಭಾರತ ಬಹುತ್ವಗಳ ತವರಾಗಿ ಉಳಿದು, ಮುಂದುವರಿಯುತ್ತಿದೆ. ಸರಸ್ವತಿ ಪೂಜೆ ಮಾಡುವ ನೀನೆಂಥ ಮುಸ್ಲಿಂ ಎಂದು ತಮ್ಮವರಿಂದಲೇ ಕಟುವಾಗಿ ಹಂಗಿಸಲ್ಪಟ್ಟಿದ್ದ ಷಹನಾಯ್ ಮಾಂತ್ರಿಕ, ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್, ಕೊನೆವರೆಗೂ ಕಾಶಿ ವಿಶ್ವನಾಥನನ್ನು ಆರಾ ಧಿಸಿದರಲ್ಲದೆ, ತಮ್ಮ ಕೊನೆಯುಸಿರನ್ನೂ ವಾರಣಾಸಿಯಲ್ಲಿಯೇ ಎಳೆದರೆಂಬುದು ಈ ನೆಲದ ಹಿರಿಮೆಗೆ ಪ್ರತ್ಯಕ್ಷ ಸಾಕ್ಷಿ.

ಜಯಗೌರಿ ಜಗದೀಶ್ವರಿ, ಓಂಕಾರ ನಾದಸ್ವರೂಪ ಬಾಲೇಂದು ಭೂಷಣ ಕಲಾಪ, ನಟವರ ಗಂಗಾಧರ ಈ ಲೀಲಾ ವಿನೋದ ವಿಹಾರ ಎಂದು ಎದೆ ತುಂಬಿ ಹಾಡಿದ ಎಸ್.ಕೆ.ಕರೀಂಖಾನ್, ಬೆಣ್ಣೆ ಕದ್ದ ನಮ್ಮ ಕೃಷ್ಣ ಬೆಣ್ಣೆ ಕದ್ದನಮ್ಮಾ .. ಎಂದು ಬಾಲ ಕೃಷ್ಣನ ಲೀಲಾವೀನೋದಗಳನ್ನೆಲ್ಲ ದಾಸರಂತೆಯೇ ಕಟ್ಟಿಕೊಟ್ಟ ಕನ್ನಡದ ಕವಿ ಕೆ.ಎಸ್.ನಿಸಾರ್‌ಅಹಮದ್, ಮಾಧವನ ಅಂತರಂಗ,ಬಹಿರಂಗಗಳನ್ನೆಲ್ಲ ಬಿಡದೆ ಶೋಧಿಸಿದ ಕೀರ್ತನ ಸಾಹಿತ್ಯವನ್ನೆಲ್ಲ ಹೃದಯಂಗಮವಾಗಿ ಹಾಡುವ ಫಯಾಜ್‌ಖಾನ್, ಗುಡಿಯ ನೋಡಿರಣ್ಣಾ ದೇಹದ ಗುಡಿಯ ನೋಡಿರಣ್ಣಾಎಂದು ಮನಬಿಚ್ಚಿ ಗುರುಗೋವಿಂದನ ದರುಶನಕ್ಕೆ ಹಾದಿ ತೋರಿಸಿದ ಸಂತ ಶಿಶುನಾಳ ಷರೀಫರನ್ನೆಲ್ಲ ಕೇವಲ ಮುಸ್ಲಿಮರೆಂದು ನೋಡುವುದಾದರೂ  ಈ ದೇಶ ಕಂಡ ಅತ್ಯದ್ಭುತ ಗಾಯಕ ಮಹ ಮದ್ ರಫಿ ಯವರ ಕಂಠದಲ್ಲೂ ಹಿಂದೂ ದೇವ-ದೇವಿಯರೆಲ್ಲ ಕುಣಿದಾಡಿದ್ದಾರೆ. ಅವರ ಮೊಮ್ಮಗಳು ಮುಸ್ತಫಾ ಪರ್ವೇಜ್ ಈಗಲೂ ಕೂಡಾ ವಿಷ್ಣುನಾಮ ಸಂಕೀರ್ತನೆಯಲ್ಲಿ ಪರವಶರಾಗಿ ಕಳೆದುಹೋಗುತ್ತಾರೆ.

ಇಷ್ಟೇ ಏಕೆ ಪರ್ವೀನ್ ಸುಲ್ತಾನಾ, ಅಬಿದಾ ಪರ್ವೀನ್, ಶಂಶಾದ್ ಬೇಗಮ್, ಸುರಯ್ಯಾ, ಬೇಗಂ ಅಖ್ತರ್‌ರಂತಹ ಹಿಂದೂಸ್ಥಾನಿ ಗಾಯಕಿಯರೆಲ್ಲರ ಕಂಠಸಿರಿಯಲ್ಲಿ ಹಿಂದೂ ದೇವರುಗಳೆಲ್ಲ ನಲಿ-ನಲಿದಾಡಿದ್ದಾರೆ. ನಂಬುವ ಮನಸ್ಸುಗಳೆಲ್ಲ ಅವರ ಹಾಡು ಗಳನ್ನು ಕೇಳಿ ಸಂತುಷ್ಟಗೊಂಡಿವೆ.  ಭಾರತ-ಚೈನಾ ನಡುವಿನ ಸಂಬಂಧ ಹದಗೆಟ್ಟಾಗ, ದೇಶ ಸ್ಥಿತಿ ತಲುಪಿದ್ದಾಗ, ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರಿಗೆ ಐದು ಸಾವಿರ ಕೇಜಿ ಚಿನ್ನವನ್ನು ಕೊಟ್ಟು, ತನ್ನ ಭಾರತೀಯತೆಯನ್ನು ಮೆರೆದ ಹೈದರಾಬಾದಿನ ನಿಜಾಮ್ ಮನೆತನದ ಒಸ್ಮಾನ್ ಅಲಿಖಾನ್, ಉಡುಪಿಯ ಶ್ರೀ ಕೃಷ್ಣನ ರಥಕ್ಕೆ ಚಿನ್ನವನ್ನು ಸೇರಿನಲ್ಲಿ ಅಳೆದು ಕೊಟ್ಟ ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲಾ ಸಾಹೇಬ್, ಭಾರತದ ತ್ರಿವರ್ಣ ಧ್ವಜಕ್ಕೆ ಅಂತಿಮ ರೂಪು ನೀಡಿದ ಸುರ ಯ್ಯಾ ಬದ್ರುದ್ದೀನ್ ತಯಾಬ್ಜಿಯಂಥವರನ್ನೆಲ್ಲ ಕೇವಲ ಮುಸ್ಲಿಮರೆಂದು ಮರೆಯುವುದಾದರೂ ಹೇಗೆ.

ಇವರೆಲ್ಲ ಅಕ್ಷರಶಃ  ಇಂತಹ ಸೌಹಾರ್ದದ ಪರಂಪರೆ ಸಾರುವ ಧೀಮಂತ ಮುಸ್ಲಿಮ್ ಭಾರತೀಯರ ನಡುವೆ, ದೇಶವನ್ನು ಒಡೆ ಯುವ, ಪ್ರತ್ಯೇಕತಾವಾದಿಗಳನ್ನು ಹೊಗಳುವ ಓವೈಸಿ, ಹಿಂದೂಗಳ ತಾಕತ್ತನ್ನೇ ಪ್ರಶ್ನಿಸುವ ಸಂಸದ ಮೌಲಾನಾ ಬದ್ರುದ್ದೀನ್ ಅಜ್ಮಲ್, ಹಿಂದೂಗಳು ಎಷ್ಟು ಬಾರಿ ಬೇಕಾದರೂ ನಮ್ಮ ಟೋಪಿ ಧರಿಸಲಿ, ನಮಾಜು ಮಾಡಲಿ. ಆದರೆ ನಾವು ಒಂದೇ ಒಂದು ಬಾರಿಯೂ ತಿಲಕವಿಡುವುದಿಲ್ಲ. ಸತ್ತರೂ ಸರಿ, ವಂದೇ ಮಾತರಂ ಹಾಡುವುದಿಲ್ಲ ಎಂದು ಬಹಿರಂಗವಾಗಿಯೇ ಘೋಷಿಸುವ ಸಮಾಜವಾದಿ ನಾಯಕ ಆಝಮ್‌ಖಾನ್‌ರಂಥ ಮನೆ ಮುರುಕರು ಮುಸ್ಲಿಮರು ಈ ದೇಶದಲ್ಲಿ ಇರುವವರೆಗೂ ಶಾಂತಿ ನೆಲೆಸುವುದಿಲ್ಲ ಎಂದು ಘೋಷಿಸುವ ಅನಂತಕುಮಾರ ಹೆಗಡೆ, ಮುಸ್ಲಿಮರಿಗೆ ಈ ದೇಶದಲ್ಲಿ ಇರುವ ಹಕ್ಕಿಲ್ಲ ಎಂದು ಸಾರುವ ಪ್ರವೀಣ್ ತೊಗಾಡಿಯಾರಂಥ ಕಿಡಿಗೇಡಿಗಳು ಮತ್ತೊಂದೆಡೆ ಗುಡುಗುತ್ತಾರೆ.

ಕೊನೆಯ ಕನವರಿಕೆ-
ಈ ಎರಡೂ ವಿಪರೀತಗಳಿಂದಾಗಿ ಸಾಮಾನ್ಯ ಜನ ನಲುಗುತ್ತಿದ್ದಾರೆ. ದಿನ-ದಿನದ ಬದುಕಿಗೆ ಅಗತ್ಯವಿಲ್ಲದ ಧರ್ಮ, ಹೊಟ್ಟೆ-ಬಟ್ಟೆಗೆ ಕೊಡಲಾಗದ ಧರ್ಮ, ಮನುಷ್ಯ ಮನುಷ್ಯರನ್ನು ಪ್ರೀತಿಯಿಂದ ಬೆಸೆಯಲಾಗದ ಧರ್ಮ ಯಾರಿಗೂ ಬೇಕಿಲ್ಲ.
ಶ್ರೀಸಾಮಾನ್ಯರನ್ನು ರೊಚ್ಚಿಗೇಳಿಸುವ ರಾಜಕಾರಣಿಗಳ ಬಣ್ಣಗಳನ್ನು ಜನರೇ ಅವರ ಪದವಿಗೆ, ಅವರ ಆಟಾಟೋಪಕ್ಕೆ ಧರ್ಮ ವನ್ನು ಆವಾಹಿಸಿ ಕೊಳ್ಳುವ ಎರಡೂ ಕಡೆಯ ಜನ ನಾಯಕರಿಗೆ ಜನರೇ ಪಾಠ ಕಲಿಸಬೇಕು. ಧರ್ಮವೆಂಬುದು ಗೋಡೆಗಳನ್ನು ಕೂಡಿಸುವ ಕರುಣೆಯ ಕರಣೆಯಾಗಬೇಕು. ಬೆಳಕೀವ ಹಣತೆಯಾಗಬೇಕು. ವಿಶೇಷವಾಗಿ, ಇಲ್ಲಿನ ಮುಸ್ಲಿಮರು, ತಮ್ಮ ಜಾಢ್ಯ ಬಿಟ್ಟು, ಹೊಸ ಬೆಳಕಿನೆಡೆಗೆ ಧಾವಿಸಬೇಕು. ಎಲ್ಲರೊಳಗೊಂದಾಗಿ ಬಾಳುವ ಗುಣವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕು. ಹೀಗಾದಲ್ಲಿ ಮಾತ್ರವೇ ಮುಸ್ಲಿಮ್ ಸಮುದಾಯಕ್ಕೆ ಅಂಟಿಸಲಾಗಿರುವ ಕೆಟ್ಟವರು ಎಂಬ ಕೆಟ್ಟ ಹಣೆಪಟ್ಟಿಯಿಂದ ಮುಕ್ತಿ ಪಡೆ ಯಲು ಸಾಧ್ಯ.

One thought on “ಇಲ್ಲಿರುವ ಎಲ್ಲ ಮುಸ್ಲಿಮರೂ ಕೆಟ್ಟವರೆ?

  1. elliruva yalla muslimaru ketttavara? anta presne madtiya hagiddara ellirura yella hindugalu valleyavara ? loffer nan magane .etara headline baribeda

Leave a Reply

Your email address will not be published. Required fields are marked *

four × five =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top