ಮಾತಿನ ಮೇಲೆ ಎಚ್ಚರವಿರಲಿ

Posted In : ಸಂಪಾದಕೀಯ-1

ಚುನಾವಣೆಗಳು ಬಂದವೆಂದರೆ ರಾಜಕಾರಣಿಗಳ ಮಾತಿನ ನಾಗಾಲೋಟಕ್ಕೆ ಕಡಿವಾಣವೇ ಇರುವುದಿಲ್ಲ. ಯಾರು ಏನೇ ಆರೋಪ ಗಳನ್ನು ಮಾಡಿದರೂ ಅದರಿಂದ ತಮಗೇನೂ ತೊಂದರೆಯಾಗುವುದಿಲ್ಲ ಎಂಬ ಧೈರ್ಯ ರಾಜಕಾರಣಿ ಗಳಲ್ಲಿ ಬಂದಂತಿದೆ. ಹೀಗಾಗಿಯೇ ಚುನಾವಣೆ ಪ್ರಚಾರದ ವೇಳೆ ಒಬ್ಬರು ಮತ್ತೊಬ್ಬರ ಮೇಲೆ, ಒಂದು ಪಕ್ಷ ಮತ್ತೊಂದು ಪಕ್ಷದ ವಿರುದ್ಧ ಆರೋಪ ಗಳನ್ನು ಮಾಡುವುದು, ಆ ಆರೋಪಗಳಿಗೆ ಮಾಡುವುದೇ ಹೆಚ್ಚು ಸದ್ದು ಮಾಡುತ್ತದೆ.

ಇದೀಗ ಆರಂಭವಾಗಿರುವ ಚುನಾವಣೆ ಪ್ರಚಾರದಲ್ಲಿ ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರದ ಬಗ್ಗೆ ಪ್ರಸ್ತಾಪ ಮಾಡಿರುವ ಶೇ.10 ರಷ್ಟು ಕಮಿಷನ್ ಸರಕಾರ ವಿಚಾರ ಹೆಚ್ಚು ಚರ್ಚಿತವಾಗುತ್ತಿದೆ. ಈ ಹಿಂದೆ ಬಿಜೆಪಿ ಅಧಿಕಾರ ದಲ್ಲಿದ್ದಾಗ ನೂರಕ್ಕೆ ನೂರರಷ್ಟು ಕಮಿಷನ್ ಸರಕಾರವಾಗಿತ್ತು ಎಂದು ಪ್ರತಿ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ಸಿದ್ದರಾಮಯ್ಯ ಸರಕಾರದ ವಿರುದ್ಧ ಮಾಡಿರುವ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರ ನೀಡಬೇಕೆಂದು ಸವಾಲು ಹಾಕಿದೆ. ಆದರೆ, ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದೆ ರಾಜ್ಯ ಸರಕಾರ ಎಂದು ಬಿಜೆಪಿ ಹೀಗಳೆಯುತ್ತಲೇ ಬರುತ್ತಿದೆ. ದಾಖಲೆಗಳನ್ನು ಇಟ್ಟುಕೊಂಡು ಇಂಥ ಆರೋಪ-ಪ್ರತ್ಯಾರೋಪಗಳನ್ನು ಮಾಡುವುದು ಸೂಕ್ತ. ಆಡಳಿತ ಮಟ್ಟದಲ್ಲಿ ಏನಾಗಿದೆ? ಏನಾಗುತ್ತಿದೆ? ಎಂಬುದು ಮತ ಕೊಟ್ಟು ಗೆಲ್ಲಿಸಿದ ಮತದಾರನಿಗೆ ತಿಳಿಯಬೇಕಾಗುತ್ತದೆ. ಏಕೆಂದರೆ, ಜನಪ್ರತಿನಿಧಿಗಳು ಮತ್ತು ಸರಕಾರ ಜನರಿಗೇ ಉತ್ತರದಾಯಿಯಾಗಿರ ಬೇಕಾಗುತ್ತದೆ.

ಪ್ರಚಾರ ಕಾವೇರುತ್ತಿದ್ದಂತೆಯೇ ಯಾವುದೋ ಪಕ್ಷದ ನಾಯಕ ಮತ್ತೊಂದು ಪಕ್ಷದ ನಾಯಕನ ವಿರುದ್ಧ ಆಕ್ಷೇಪಾರ್ಹವಾದ ಭಾಷೆ ಬಳಸಿ ನೀಡುವ ಹೇಳಿಕೆ ಇಡೀ ಚುನಾವಣೆ ಪ್ರಚಾರದ ದಿಕ್ಕನ್ನೇ ಇದಕ್ಕೆ ಹಲವಾರು ನಿದರ್ಶನಗಳೂ ಇವೆ. ದೇಶದ ಗಮನ ಸೆಳೆದ ಗುಜರಾತ್ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಬಿಜೆಪಿ ನಾಯಕರ ಬಗ್ಗೆ ಆಡಿದ ಕೆಲವು ಆಕ್ಷೇಪಾರ್ಹ ಮಾತುಗಳು ಕಾಂಗ್ರೆಸ್ ಪಕ್ಷದ ಗೆಲುವಿನ ಅಂತರವನ್ನು ಕಡಿಮೆ ಮಾಡಲು ಕಾರಣವಾಯಿತು.

ಇನ್ನು ವ್ಯಕ್ತಿಗತವಾದ ಆರೋಪಗಳನ್ನು ಮಾಡುವಾಗ ಪ್ರತಿಯೊಂದು ಪಕ್ಷದ ನಾಯಕರು ಎಚ್ಚರಿಕೆಯನ್ನು ವಹಿಸಬೇಕಾದ ಅಗತ್ಯವಿದೆ. ಐದು ವರ್ಷಗಳಿಗೊಮ್ಮೆ ಜನರ ಬಳಿಗೆ ಹೋಗುವ ನಾಯಕರು ಆ ಜನರ ಸಮಸ್ಯೆಗಳನ್ನು ನಿಟ್ಟಿನಲ್ಲಿ ವಿಚಾರಗಳನ್ನು ಪ್ರಸ್ತಾಪಿಸಬೇಕು. ಅದರ ಹೊರತಾಗಿ ವೈಯಕ್ತಿಕ ನಿಂದನೆಗಳನ್ನು ಮಾಡುತ್ತಾ ಮತ ಹಾಕಿ ಗೆಲ್ಲಿಸುವ ಜನರ ವಿಚಾರಗಳನ್ನು ಮರೆ ಯಬಾರದು. ಒಂದು ವೇಳೆ ಒಬ್ಬ ವ್ಯಕ್ತಿ ಅಥವಾ ನಾಯಕನಿಂದ ಜನರಿಗೆ ಅನ್ಯಾಯವಾಗಿದೆ, ಆತ ಭ್ರಷ್ಟಾಚಾರದಲ್ಲಿ ತೊಡಗಿ ದ್ದಾನೆ ಎಂಬುದರ ಬಗ್ಗೆ ಸೂಕ್ತ ದಾಖಲಾತಿಗಳಿದ್ದರೆ ಜನರ ಬಳಿ ಇಟ್ಟು ಪಾರದರ್ಶಕತೆ ಮೆರೆಯಲಿ. ಅದನ್ನು ಬಿಟ್ಟು ರಾಜ ಕಾರಣಕ್ಕೋಸ್ಕರವಾಗಿ ಆರೋಪ, ನಿಂದನೆ ಮಾಡುವುದು ಒಳಿತಲ್ಲ.

One thought on “ಮಾತಿನ ಮೇಲೆ ಎಚ್ಚರವಿರಲಿ

Leave a Reply

Your email address will not be published. Required fields are marked *

eight + 16 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top